Monday, August 10, 2026
Homeಜಿಲ್ಲಾಸುದ್ದಿಉಡುಪಿ: ಮೋದಿಗೆ ಭಾರತ ಭಾಗ್ಯವಿದಾತ ಪ್ರಶಸ್ತಿ- ವಿರೋಧಿಗಳಿಗೆ ಪುತ್ತಿಗೆ ಶ್ರೀ ತಿರುಗೇಟು

ಉಡುಪಿ: ಮೋದಿಗೆ ಭಾರತ ಭಾಗ್ಯವಿದಾತ ಪ್ರಶಸ್ತಿ- ವಿರೋಧಿಗಳಿಗೆ ಪುತ್ತಿಗೆ ಶ್ರೀ ತಿರುಗೇಟು

Telegram Group
Join Now

ಉಡುಪಿ: ಪ್ರಧಾನಿ ಮೋದಿ ಕೃಷ್ಣಮಠಕ್ಕೆ ಭೇಟಿ ನೀಡಿದಾಗ ಪುತ್ತಿಗೆ ಮಠಾಧೀಶರು ಪ್ರಧಾನಿಗೆ ಭಾರತ ಭಾಗ್ಯವಿಧಾತ ಬಿರುದು ನೀಡಿ ಸನ್ಮಾನ ಮಾಡಿದ್ದರು.ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಪುತ್ತಿಗೆ ಶ್ರೀಗಳು ,ಪ್ರಧಾನಿ ನರೇಂದ್ರ ಮೋದಿ ಭಾರತದ ಭಾಗ್ಯವನ್ನು ಬೆಳಗಿದವರು.ವಕೀಲರ ಬಳಿಯೂ ಈ ಹೆಸರಿನ ಬಗ್ಗೆ ವಿಚಾರ ಮಾಡಿದ್ದೆವು. ನರೇಂದ್ರ ಮೋದಿ ಅವರಿಗೆ ಸರಿಯಾಗಿ ಅನ್ವಯವಾಗುತ್ತದೆ ಎಂದು ಈ ಬಿರುದು ಕೊಟ್ಟೆವು .ದೇಶಕ್ಕೆ ಮೋದಿ ಅವರ ಕೊಡುಗೆ ಮಹತ್ವದ್ದು ಎಂದು ಹೇಳಿದ್ದಾರೆ.

ರಾಮಮಂದಿರ ನಿರ್ಮಾಣ , ಕಾಶ್ಮೀರದ ಸಮಸ್ಯೆ ಬಗೆ ಹರಿಸಿದ್ದು ,ಉಗ್ರಗಾಮಿಗಳಿಗೆ ಪ್ರತ್ಯುತ್ತರ ನೀಡಿದ್ದು, ದೇಶ ರಕ್ಷಣೆ ಮತ್ತು ಆರ್ಥಿಕತೆಯ ವಿಚಾರದಲ್ಲೂ
ಮೋದಿಯವರುಭಾರತದ ಭಾಗ್ಯದ ಬಾಗಿಲನ್ನು ತೆರೆದಿದ್ದಾರೆ ಎಂಬುದು ನಮ್ಮ ಭಾವನೆ. ವಿಶ್ವಮಟ್ಟದಲ್ಲೂ ವಿಶ್ವ ನಾಯಕರಾಗಿ ಅವರು ಗುರುತಿಸಿಕೊಂಡಿದ್ದಾರೆ. ಭಾರತದ ಗೌರವ ಪ್ರಧಾನಿ ಮೋದಿ ಅವರಿಂದ ಹೆಚ್ಚಾಗಿದೆ.ನಾನು 25 ವರ್ಷಗಳಿಂದ ವಿಶ್ವ ಸಂಚಾರ ಮಾಡುತ್ತಿದ್ದೇನೆ .
ಭಾರತವನ್ನು ನೋಡುವ ದೃಷ್ಟಿಯೇ ಬದಲಾಗಿದೆ.ಭಾರತದ ಘನತೆ ಪ್ರಧಾನಿ ಮೋದಿಯಿಂದ ಜಾಸ್ತಿ ಆಗಿದೆ .ಈ ಕಾರಣಕ್ಕೆ ಭಾರತ ಭಾಗ್ಯ ವಿಧಾತ ಹೆಸರನ್ನು ಆಯ್ಕೆ ಮಾಡಿದ್ದೇವೆ ಎಂದು ಶ್ರೀಗಳು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments