Wednesday, August 19, 2026
Homeಕ್ರೈಮ್ದರ್ಶನ್‌ ಕೇಸ್: ರೇಣುಕಾಸ್ವಾಮಿ ಪೋಷಕರಿಗೆ ಕೋರ್ಟ್‌ʼನಿಂದ ಸಮನ್ಸ್ ಜಾರಿ

ದರ್ಶನ್‌ ಕೇಸ್: ರೇಣುಕಾಸ್ವಾಮಿ ಪೋಷಕರಿಗೆ ಕೋರ್ಟ್‌ʼನಿಂದ ಸಮನ್ಸ್ ಜಾರಿ

Telegram Group
Join Now

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗಿದೆ. ಬೆಂಗಳೂರಿನ ಸ್ಥಳೀಯ ನ್ಯಾಯಾಲಯವು ಈ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದು, ಡಿಸೆಂಬರ್ 17 ರಿಂದ ಸಾಕ್ಷ್ಯ ವಿಚಾರಣೆ ಆರಂಭಿಸಲು ತೀರ್ಮಾನಿಸಲಾಗಿದೆ.


ಪ್ರಕರಣದ ವಿಚಾರಣೆಗಾಗಿ ನ್ಯಾಯಾಧೀಶರು, ಮೃತ ರೇಣುಕಾಸ್ವಾಮಿಯ ಪೋಷಕರಾದ ತಂದೆ ಮತ್ತು ತಾಯಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ಸಹಾಯಕ ಎಸ್.ಪಿ.ಪಿ. ಸಚಿನ್ ಅವರು ನ್ಯಾಯಾಲಯಕ್ಕೆ ಸಾಕ್ಷಿಗಳ ಪಟ್ಟಿಯನ್ನು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಮೊದಲ ಹಂತದ ವಿಚಾರಣೆಗಾಗಿ ರೇಣುಕಾಸ್ವಾಮಿಯವರ ಪೋಷಕರು ಮತ್ತು ಮೃತದೇಹವನ್ನು ಮೊದಲು ನೋಡಿದ ಬೆಂಗಳೂರಿನ ವಾಚ್‌ಮನ್‌ಗೆ ನ್ಯಾಯಾಲಯ ಸಮನ್ಸ್ ಕಳುಹಿಸಿದೆ.

ಪ್ರಕರಣ ಹಿನ್ನಲೆ
ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿಯನ್ನು ಜೂನ್ 8, 2024 ರಂದು ನಟ ದರ್ಶನ್ ಅವರು ಸಂಗಾತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆಂದು ಆರೋಪಿಸಿ ದರ್ಶನ್ ಹಾಗೂ ಸ್ನೇಹಿತರು ರೇಣುಕಾಸ್ವಾಮಿಯನ್ನು ಅಪಹರಿಸಿ ಕೊಲೆ ಮಾಡಿರುವ ಆರೋಪವಿದೆ. ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ಸದ್ಯ ಜೈಲಿನಲ್ಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments