ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಧುರಂಧರ್ (Dhurandhar) ಸಿನಿಮಾವು ದಿನದಿಂದ ದಿನಕ್ಕೆ ಬಾಕ್ಸ್ ಆಫೀಸ್ ದಾಖಲೆಗಳನ್ನ ಉಡೀಸ್ ಮಾಡ್ತಿದೆ. ಎರಡನೇ ಶುಕ್ರವಾರ ಹಿಂದಿ ಸಿನಿಮಾದ ಕೆಲವು ದೊಡ್ಡ ಬ್ಲಾಕ್‌ಬಸ್ಟರ್‌ಗಳ ದಾಖಲೆಗಳನ್ನು ಮುರಿದು ಊಹಿಸಲೂ ಸಾಧ್ಯವಾಗದಂತಹ ಗಳಿಕೆಯನ್ನು ಸಾಧಿಸಿದೆ.
ಸಾಮಾನ್ಯವಾಗಿ ಸಿನಿಮಾಗಳ ವೇಗವು ಎರಡನೇ ವಾರದಲ್ಲಿ ನಿಧಾನವಾಗುತ್ತದೆ, ಆದರೆ ‘ಧುರಂಧರ್’ ಎರಡನೇ ವಾರದಲ್ಲಿ ವೇಗ ಪಡೆದಿದೆ. ಎರಡನೇ ಶುಕ್ರವಾರದಂದು ಈ ಚಿತ್ರವು ಸುಮಾರು ₹34.70 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ‘ಪುಷ್ಪಾ 2’, ‘ಛಾವಾ’, ‘ಅನಿಮಲ್’, ‘ಗದರ್ 2’ ಮತ್ತು ‘ಬಾಹುಬಲಿ 2’ ನಂತಹ ದಿಗ್ಗಜ ಸಿನಿಮಾಗಳ ದಾಖಲೆ ಹಿಂದಿಕ್ಕಿದೆ.
ಚಲನಚಿತ್ರ | ಎರಡನೇ ಶುಕ್ರವಾರದ ಕಲೆಕ್ಷನ್ (ಕೋಟಿ ರೂ.) |
| ಧುರಂಧರ್ | 34.70 |
| ಪುಷ್ಪಾ 2 | 27.50 |
| ಛಾವಾ | 24.03 |
| ಅನಿಮಲ್ | 23.53 |
| ಗದರ್ 2 | 20.50 |
| ಬಾಹುಬಲಿ 2 | 19.75 |
‘ಪುಷ್ಪಾ 2’ ಮತ್ತು ‘ಛಾವಾ’ ದಾಖಲೆ ಧ್ವಂಸ
ಎರಡನೇ ಶುಕ್ರವಾರದ ಗಳಿಕೆಯನ್ನು ಹೋಲಿಸಿದರೆ, ‘ಪುಷ್ಪಾ 2’ ಚಿತ್ರದ ಹಿಂದಿ ಕಲೆಕ್ಷನ್ ಸುಮಾರು ₹27 ಕೋಟಿಯಷ್ಟಿತ್ತು, ‘ಛಾವಾ’ ಮತ್ತು ‘ಅನಿಮಲ್’ ಎರಡೂ ₹25 ಕೋಟಿಗಳ ಗಡಿಯನ್ನು ದಾಟಲು ಸಾಧ್ಯವಾಗಿರಲಿಲ್ಲ. ಧುರಂಧರ್ ಈ ಎಲ್ಲ ಚಿತ್ರಗಳನ್ನು ದೊಡ್ಡ ಅಂತರದಿಂದ ಹಿಂದಿಕ್ಕಿ, ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ಕ್ರೇಜ್ ಹೆಚ್ಚಿಸಿದೆ.
ಭಾರತದಲ್ಲಿ ಚಿತ್ರದ ಒಟ್ಟು ಕಲೆಕ್ಷನ್!
ಭಾರತದಲ್ಲಿ ಚಿತ್ರದ ಒಟ್ಟು ಕಲೆಕ್ಷನ್ ₹252 ಕೋಟಿಗಳನ್ನು ದಾಟಿದೆ. ಈ ಅಂಕಿ-ಅಂಶವು ಎರಡನೇ ವಾರದ ಆರಂಭದ್ದು, ಹಾಗಾಗಿ ಟ್ರೇಡ್ ಎಕ್ಸ್‌ಪರ್ಟ್‌ಗಳು ಸದ್ಯಕ್ಕೆ ಇದರ ಲೈಫ್‌ಟೈಮ್ ಕಲೆಕ್ಷನ್ ಬಗ್ಗೆ ಯಾವುದೇ ನಿರ್ದಿಷ್ಟ ಭವಿಷ್ಯ ನುಡಿಯಲು ಹಿಂಜರಿಯುತ್ತಿದ್ದಾರೆ. ಚಿತ್ರದ ಟ್ರೆಂಡ್ ನೋಡಿದರೆ, ಪ್ರತಿದಿನ ಹೊಸ ದಾಖಲೆ ಮುರಿಯುವಂತೆ ಗೋಚರಿಸುತ್ತಿದೆ.
‘ಧುರಂಧರ್’ ಯಶಸ್ಸಿಗೆ ಕಾರಣವೇನು?
ಧುರಂಧರ್ ಚಿತ್ರದ ಭಾರಿ ಯಶಸ್ಸಿಗೆ ಮುಖ್ಯ ಕಾರಣಗಳು ಅದರ ವಿಭಿನ್ನ ಕಥೆ, ಉತ್ತಮ ನಿರ್ದೇಶನ ಮತ್ತು ಕಲಾವಿದರ ಪ್ರಭಾವಶಾಲಿ ನಟನೆ. ಚಿತ್ರದ ಮೇಕಿಂಗ್ ಕೂಡ ಉತ್ತಮವಾಗಿದೆ. ಬಲವಾದ ಮೌತ್ ಪಬ್ಲಿಸಿಟಿ (Word of Mouth) ಕಾರಣದಿಂದಾಗಿ, ವಾರಾಂತ್ಯದ ಜೊತೆಗೆ ವಾರದ ದಿನಗಳಲ್ಲಿಯೂ ಉತ್ತಮ ಪ್ರದರ್ಶನ ಕಂಡು, ಎರಡನೇ ವಾರದಲ್ಲಿಯೂ ಚಿತ್ರದ ಗಳಿಕೆ ಹೆಚ್ಚಿದೆ. ಸದ್ಯಕ್ಕೆ ಇದು 2025ರ ಬಾಕ್ಸ್ ಆಫೀಸ್‌ನ ಅತಿದೊಡ್ಡ ಹಿಟ್‌ಗಳಲ್ಲಿ ಒಂದಾಗಿದೆ.
