ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸಕಲೇಶಪುರದಿಂದ ಹಾನುಬಾಳು ಮಾರ್ಗವಾಗಿ ದೇವವೃಂದ ಗ್ರಾಮ ಹಾಗು ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನ ಮತ್ತು ಪಶ್ಚಿಮ ಘಟ್ಟದ ಹಲವಾರು ಗ್ರಾಮೀಣ ಪ್ರದೇಶವನ್ನು ಸಂಪರ್ಕಿಸುವ ರಸ್ತೆ ಪರಿಸ್ಥಿತಿ ಹಾಳಾಗಿದೆ ಎಂದು ಸಾಮಾಜಿಕ ಹೋರಾಟಗಾರ ಪೃಥ್ವಿ ಅವರೇಕಾಡು ಕಿಡಿ ಕಾರಿದ್ದಾರೆ.
ಹೌದು .. ಮಲೆನಾಡು ಭಾಗದ ಜನರು ಕೇಳುವುದು ಒಂದೇ ಓಡಾಡುವಂತಹ ಗುಣಮಟ್ಟದ ರಸ್ತೆಯಾವಾಗ ಎಂದು? ಹಾಗೆ ಚಿಕ್ಕಮಗಳೂರು ಉಡುಪಿ ಕ್ಷೇತ್ರದ ಲೋಕಸಭಾ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಅವರಲ್ಲಿ ಈ ಭಾಗದ ಸಾರ್ವಜನಿಕರ ಪರವಾಗಿ ಮನವಿ ಮಾಡಲಾಗಿದೆ.
ಕೇಂದ್ರದ ಯಾವುದಾದರು ಯೋಜನೆಯಲ್ಲಿ ಹಣ ತಂದು ಈ ರಸ್ತೆಯನ್ನು ಪುನರ್ ನಿರ್ಮಾಣ ಮಾಡಿಸಿ ಮತ್ತು ಶಿಥಿಲಗೊಂಡಿರುವ ಜಪಾವತಿ ಸೇತುವೆಯನ್ನು ಪುನರ್ ನಿರ್ಮಾಣ ಮಾಡಿಸಿ ಕೊಡಿ ಎಂದು ಈ ಭಾಗದ ಸಮಸ್ತ ನಾಗರಿಕರ ಪರವಾಗಿ ಸಾಮಾಜಿಕ ಹೋರಾಟಗಾರ ಪೃಥ್ವಿ ಅವರೇಕಾಡು ಆಗ್ರಹಿಸಿದ್ದಾರೆ
