Sunday, July 5, 2026
Homeಆರೋಗ್ಯಬಾದಾಮಿಯನ್ನು ಸಿಪ್ಪೆ ಸುಲಿದು ತಿನ್ನಬೇಕೋ ಅಥವಾ ಬೇಡವೋ? ತಜ್ಞರ ಉತ್ತರ ಇಲ್ಲಿದೆ

ಬಾದಾಮಿಯನ್ನು ಸಿಪ್ಪೆ ಸುಲಿದು ತಿನ್ನಬೇಕೋ ಅಥವಾ ಬೇಡವೋ? ತಜ್ಞರ ಉತ್ತರ ಇಲ್ಲಿದೆ

Telegram Group
Join Now

ಬಾದಾಮಿ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಬಾದಾಮಿಯನ್ನು ಸಿಪ್ಪೆಯ ಸಮೇತ ತಿನ್ನಬೇಕೇ ಅಥವಾ ಸಿಪ್ಪೆ ಸುಲಿದು ತಿನ್ನಬೇಕೇ ಎಂಬ ಪ್ರಶ್ನೆ ಹಲವರಿಗೆ ಕಾಡುತ್ತೆ. ಆದರೆ ಹೆಚ್ಚಿನವರು ಬಾದಾಮಿಯನ್ನು ನೆನೆಸಿಟ್ಟು ಸಿಪ್ಪೆ ಸುಲಿದು ತಿನ್ನುತ್ತಾರೆ. ಆದರೆ ಆರೋಗ್ಯ ತಜ್ಞರು, ಬಾದಾಮಿಯನ್ನು ಸಿಪ್ಪೆ ಸಮೇತ ತಿನ್ನಬೇಕೆಂದು ಹೇಳುತ್ತಾರೆ.

ಪೋಷಕಾಂಶಗಳ ಗಣಿ ಬಾದಾಮಿ ಸಿಪ್ಪೆ
ಬಾದಾಮಿ ಸಿಪ್ಪೆಯಲ್ಲಿ ಆಂಟಿ-ಆಕ್ಸಿ ಡೆಂಟ್‌ ಮತ್ತು ನಾರಿನಂಶ (ಫೈಬರ್) ಹೇರಳವಾಗಿದೆ. ಇದು ದೇಹದ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುವುದಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಿಪ್ಪೆ ಸಮೇತ ಸೇವಿಸುವುದರಿಂದ ದೇಹಕ್ಕೆ ಹೆಚ್ಚಿನ ನಾರಿನಂಶ ದೊರೆಯುತ್ತದೆ.

ತೂಕ ಇಳಿಕೆಗೆ ಸಹಕಾರಿ
ನೀವು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ ಸಿಪ್ಪೆಯೊಂದಿಗೆ ಬಾದಾಮಿ ತಿನ್ನುವುದು ಉತ್ತಮ. ಇದರಲ್ಲಿರುವ ನಾರಿನಂಶವು ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಇದರಿಂದ ಪದೇ ಪದೇ ಹಸಿವಾಗುವುದು ಕಡಿಮೆಯಾಗಿ, ಹೆಚ್ಚೆಚ್ಚು ಆಹಾರ ಸೇವನೆ ಮಾಡುವುದನ್ನು ತಡೆಯಬಹುದು.

ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯ
ಬಾದಾಮಿ ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳನ್ನು ವೃದ್ಧಿಸುವ ಮೂಲಕ ಕರುಳನ್ನು ಸ್ವಚ್ಛವಾಗಿಡಲು ನೆರವಾಗುತ್ತದೆ.

ಹೃದಯ ಮತ್ತು ಮೂಳೆಗಳ ರಕ್ಷಣೆ
ಬಾದಾಮಿಯಲ್ಲಿರುವ ಆರೋಗ್ಯಕರ ಕೊಬ್ಬುಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತವೆ. ಅಲ್ಲದೆ ಇದರಲ್ಲಿರುವ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕದಂತಹ ಅಂಶಗಳು ಮೂಳೆಗಳನ್ನು ಬಲಪಡಿಸಲು ಮತ್ತು ಆಸ್ಟಿಯೋ ಪೋರೋಸಿಸ್ ನಂತಹ ಸಮಸ್ಯೆಗಳನ್ನು ತಡೆಯಲು ಸಹಕಾರಿಯಾಗಿವೆ.

ಸೇವನೆಯ ಸರಿಯಾದ ಕ್ರಮ
ಪ್ರತಿದಿನ ರಾತ್ರಿ 5 ರಿಂದ 7 ಬಾದಾಮಿಗಳನ್ನು ಶುದ್ಧವಾದ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅವುಗಳನ್ನು ಸಿಪ್ಪೆ ಸಮೇತ ಸೇವಿಸಿ.

ನೆನಪಿಡಿ, ಬಾದಾಮಿಯನ್ನು ಅವಸರದಲ್ಲಿ ನುಂಗುವ ಬದಲು ಚೆನ್ನಾಗಿ ಅಗಿದು ತಿನ್ನುವುದರಿಂದ ಅದರಲ್ಲಿರುವ ಎಲ್ಲಾ ಪೋಷಕಾಂಶಗಳು ನಿಮ್ಮ ದೇಹಕ್ಕೆ ಸಂಪೂರ್ಣವಾಗಿ ಲಭ್ಯವಾಗುತ್ತವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments