Thursday, July 30, 2026
Homeಆರೋಗ್ಯDocters Day Special ವೈದ್ಯರಿಗೆ ಸನ್ಮಾನ, ಸರ್ವೈಕಲ್ ಕ್ಯಾನ್ಸರ್ & ಪಾರ್ಶ್ವವಾಯು ಕುರಿತು ಜಾಗೃತಿ ಅಭಿಯಾನ

Docters Day Special ವೈದ್ಯರಿಗೆ ಸನ್ಮಾನ, ಸರ್ವೈಕಲ್ ಕ್ಯಾನ್ಸರ್ & ಪಾರ್ಶ್ವವಾಯು ಕುರಿತು ಜಾಗೃತಿ ಅಭಿಯಾನ

Telegram Group
Join Now

ಮೂಡಿಗೆರೆ: ರೋಟರಿ ಇಂಟರ್‌ನ್ಯಾಷನಲ್ ಜಿಲ್ಲೆ 3182, ವಲಯ 08 ರೋಟರಿ ಕ್ಲಬ್ ಮುಡಿಗೆರೆ ವತಿಯಿಂದ ನಿನ್ನೆ “ಡಾಕ್ಟರ್ಸ್ ಡೇ” ಮತ್ತು “ವೀಕ್ಲಿ ಮೀಟಿಂಗ್” ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜದ ಆರೋಗ್ಯಕ್ಕಾಗಿ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ಇಬ್ಬರು ವೈದ್ಯರನ್ನು ಸನ್ಮಾನಿಸಿ “Certificate of Excellence” ಪ್ರದಾನ ಮಾಡಲಾಯಿತು. ಸನ್ಮಾನ ಸಮಾರಂಭದಲ್ಲಿ PDG DRFC DS ರವಿ ಅವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕ್ಲಬ್ ನ ಮಾಜಿ ಸದಸ್ಯರಾದ ಸಿದ್ದಾರ್ಥ ಹೆಗಡೆಯವರ ಏಳನೇ ವರ್ಷದ ಪುಣ್ಯತಿಥಿ ಅಂಗವಾಗಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಲಾಯಿತು.

ಉಪನ್ಯಾಸಗಳು:
1. ಡಾ. ಅನುಪಮ ಮಾರ್ನಲ್ – ಸ್ತ್ರೀ ರೋಗ ತಜ್ಞರು
“ಸರ್ವೈಕಲ್ ಕ್ಯಾನ್ಸರ್ – ತಡೆಗಟ್ಟುವಿಕೆ ಮತ್ತು ಜಾಗೃತಿ” ಎಂಬ ವಿಷಯದ ಬಗ್ಗೆ ಮಾತನಾಡಿದರು.
“HPV ಲಸಿಕೆ ಮತ್ತು 3 ವರ್ಷಕ್ಕೊಮ್ಮೆ Pap Smear Test ಮಾಡಿಸುವುದರಿಂದ ಸರ್ವೈಕಲ್ ಕ್ಯಾನ್ಸರ್ ಅನ್ನು 100% ತಡೆಗಟ್ಟಬಹುದು. 9 ರಿಂದ 26 ವರ್ಷದ ಹುಡುಗಿಯರಿಗೆ ಲಸಿಕೆ ಅತಿ ಮುಖ್ಯ. ಆರಂಭಿಕ ಪತ್ತೆಯಿಂದ ಶೇ.90 ರಷ್ಟು ಗುಣಮುಖರಾಗಬಹುದು” ಎಂದು ಅವರು ತಿಳಿಸಿದರು.

2. ಡಾ. ಸುಮುಖ – ನ್ಯೂರೋ ತಜ್ಞರು
“ಪಾರ್ಶ್ವವಾಯು – ಕಾರಣಗಳು, ಲಕ್ಷಣಗಳು ಮತ್ತು ತುರ್ತು ಚಿಕಿತ್ಸೆ” ಎಂಬ ವಿಷಯದ ಕುರಿತು ಮಾತನಾಡಿದರು.
“ಪಾರ್ಶ್ವವಾಯು ಬಂದ 3 ರಿಂದ 4.5 ಗಂಟೆಯ ಒಳಗೆ ಚಿಕಿತ್ಸೆ ಕೊಟ್ಟರೆ ಜೀವ ಉಳಿಸಬಹುದು. ಮೈಯ ಒಂದು ಭಾಗ ಜೋತು ಬೀಳುವುದು, ಮಾತು ತೊದಲುವುದು, ಮುಖ ಒಂದು ಕಡೆ ಬಾಗುವುದು ಇವು ಮುಖ್ಯ ಲಕ್ಷಣಗಳು. ಇಂತಹ ಲಕ್ಷಣ ಕಂಡ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು” ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷರಾದ Rtn. ದಿನೇಶ್ BK ವಹಿಸಿದ್ದರು.
ಅವರು ಕಾರ್ಯಕ್ರಮದ ಸ್ವಾಗತವನ್ನೂ ನೆರವೇರಿಸಿದರು.
ಕಾರ್ಯದರ್ಶಿ Rtn. ಸಂತೋಷ್ ಕುಮಾರ್ HB ರವರು ವಂದನೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಕ್ಲಬ್ ನ ಎಲ್ಲಾ ಪದಾಧಿಕಾರಿಗಳು, ಸುಮಾರು 50 ಕ್ಕೂ ಹೆಚ್ಚು ರೋಟೇರಿಯನ್‌ಗಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments