ಮೂಡಿಗೆರೆ: ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿರುವ ಗೋಣಿಬೀಡು ಮೂಲದ ದಂಪತಿಯ ಮಗನ ಚಿಕಿತ್ಸೆಯ ಹಣ ಸಹಾಯಕ್ಕಾಗಿ ಕುಟುಂಬವೊಂದು ದಾನಿಗಳಿಂದ ನೆರವಿನ ನಿರೀಕ್ಷೆಯಲ್ಲಿದೆ.
ಹೌದು ಪ್ರಸ್ತುತ ಕೇರಳದಲ್ಲಿ ವಾಸವಿರುವ ಇವರು ಮೂಲತಹಃ ಗೋಣಿಬೀಡು ಮೂಲದ ದಂಪತಿಯಾಗಿದ್ದು ಇವರ ಪುತ್ರ ಅಭಿಜಿತ್ ಆರ್ ಪೂಟ್ಟಿ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದುಮಗನ ಚಿಕಿತ್ಸೆಗೆ ಪೋಷಕರು ಶಕ್ತಿ ಮೀರಿ ಪ್ರಯತ್ನಿಸಿದ್ದು ಈಗಾಗಲೇ ಲಕ್ಷ ಗಟ್ಟಲೆ ಹಣ ವ್ಯಯಿಸಿರುತ್ತಾರೆ.

ಬಡ ಕುಟುಂಬದ ಇವರು
ಅನಾರೋಗ್ಯದಿಂದ ಬಳಲುತ್ತಿದ್ದ ಮಗನ ಚಿಕಿತ್ಸೆಗೆ ಸಾಲ ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದು ಮುಂದಿನ ಚಿಕಿತ್ಸೆಗೆ ಹಣವಿಲ್ಲದೇ ಕೈ ಚೆಲ್ಲಿ ಕುಳಿತಿದೆ,
ಚಿಕಿತ್ಸೆಗೆ ಹಣವಿಲ್ಲದೇ ಪರದಾಡುತ್ತಿರುವ ಈ ಕುಟುಂಬ
ದಾನಿಗಳಿಂದ ನೆರವಿನ ನಿರೀಕ್ಷೆಯಲ್ಲಿದ್ದಾರೆ.ಈ ಕೆಳಗಿನ ಖಾತೆಗೆ ತಮ್ಮ ತಮ್ಮ ಕೈಲಾದಷ್ಟು ಹಣ ನೀಡಿ ಮಗನ ಚಿಕಿತ್ಸೆಗೆ ನೇರವಾಗುವಂತೆ ಪೋಷಕರು ಮನವಿ ಮಾಡಿದ್ದಾರೆ
ಹೆಚ್ಚಿನ ಮಾಹಿತಿಗೆ 8086340183 ಸಂಖ್ಯೆಗೆ ಸಂರ್ಪಕಿಸಬಹುದಾಗಿದೆ.
