Monday, August 17, 2026
Homeಕ್ರೈಮ್ಎನ್‌ ಆರ್‌ ಪುರ: ಅಡಿಕೆ ದರೋಡೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ!

ಎನ್‌ ಆರ್‌ ಪುರ: ಅಡಿಕೆ ದರೋಡೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ!

Telegram Group
Join Now

ಎನ್‌ ಆರ್‌ ಪುರ: ಅಡಿಕೆ ದರೋಡೆ ಪ್ರಕರಣ ಭೇದಿಸಿರುವ ಪೊಲೀಸರು, ಮಾಲು ಸಮೇತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಭದ್ರಾವತಿ ತಾಲ್ಲೂಕು ಅಗರದಹಳ್ಳಿ ಕ್ಯಾಂಪ್‌ನ ನಿವಾಸಿ ವಿರೇಶ, ಮಹೇಶ, ಎಂ.ಕಾರ್ತಿಕ ಹಾಗೂ ಆರ್. ಶ್ರೀಹರಿ ಬಂಧಿತರು.

ತಾಲ್ಲೂಕಿನ ಬಾಳೆಹೊನ್ನೂರು– ನರಸಿಂಹರಾಜಪುರ ಮಾರ್ಗಮಧ್ಯೆ ಬರುವ ಅಳೇಹಳ್ಳಿ ಗ್ರಾಮದಲ್ಲಿ ಡಿ. 12ರಂದು ಪಿಕಪ್ ವಾಹನ ಅಡ್ಡಗಟ್ಟಿ ವಾಹನದ ಮಾಲೀಕ ಕೆ. ರವಿ ಹಾಗೂ ಚಾಲಕ ವಿಶ್ವಾಸ್‌ ಮೇಲೆ ಹಲ್ಲೆ ನಡೆಸಿ, 44 ಕ್ವಿಂಟಲ್ ತೂಕದ 67 ಚೀಲ ಹಸಿ ಅಡಿಕೆ, ₹29 ಸಾವಿರ ನಗದು ಹಾಗೂ 2 ಮೊಬೈಲ್ ಫೋನ್‌ಗಳನ್ನು ದರೋಡೆ ಮಾಡಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ದರೋಡೆ ಮಾಡಿದ್ದ ₹2.56 ಲಕ್ಷ ಮೌಲ್ಯದ 44 ಕ್ವಿಂಟಲ್ ಅಡಿಕೆ, ₹3 ಲಕ್ಷ ಮೌಲ್ಯದ ಬೊಲೆರೋ ವಾಹನ, ಅಂದಾಜು ₹15 ಸಾವಿರ ಮೊತ್ತದ ಬೈಕ್ ಸೇರಿ ₹5.71 ಲಕ್ಷದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಗುರುದತ್ ಕಾಮತ್, ಸಬ್ ಇನ್‌ಸ್ಪೆಕ್ಟರ್ ಬಿ.ಎಸ್. ನಿರಂಜನ್ ಗೌಡ, ಅಪರಾಧ ವಿಭಾಗದ ಸಬ್ ಇನ್‌ಸ್ಪೆಕ್ಟರ್ ಎನ್.ಎ. ಜ್ಯೋತಿ, ಸಿಬ್ಬಂದಿಗಳಾದ ಮಧು, ಎಸ್.ಜಿ. ಸೋಮೇಶ, ಯುಗಾಂಧರ, ಪಿ.ಎ. ಬಿನು, ಅಮಿತ್ ಚೌಗುಲೆ, ದೇವರಾಜ, ರೇವಗೊಂಡ ಅರಾಧರ, ಎಂ.ಸಿ. ಮನು, ಮುರುಗೇಶ, ಚಂದ್ರಕಾಂತ ಪೂಜಾರಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments