Wednesday, June 24, 2026
Homeಕ್ರೈಮ್ಹಾಸನ: ನ್ಯೂ ಇಯರ್ ಪಾರ್ಟಿಗೆ ಗೋವಾಕ್ಕೆ ತೆರಳಿದ್ದ ಯುವಕ ಹೃದಯಾಘಾತದಿಂದ ಸಾವು!

ಹಾಸನ: ನ್ಯೂ ಇಯರ್ ಪಾರ್ಟಿಗೆ ಗೋವಾಕ್ಕೆ ತೆರಳಿದ್ದ ಯುವಕ ಹೃದಯಾಘಾತದಿಂದ ಸಾವು!

ಹಾಸನ: ನ್ಯೂ ಇಯರ್ ಪಾರ್ಟಿಗೆ ಗೋವಾಕ್ಕೆ ಹೋಗಿದ್ದ ಆಲೂರು ತಾಲೂಕಿನ ಹೊಸಳ್ಳಿ ಗ್ರಾಮದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.‌

ಮೃತನನ್ನು ರಕ್ಷಿತ್ (26) ಎಂದು ಗುರುತಿಸಲಾಗಿದೆ. ಸಂಬಂಧಿಕರು ಹಾಗೂ ಸಹೋದರರಾದ ಚಿದಂಬರಂ, ಪ್ರವೀಣ್ ಜೊತೆ ಡಿ.31 ರಂದು ರಕ್ಷಿತ್ ಗೋವಾಗೆ ತೆರಳಿದ್ದರು. ಡಿ.31 ರಂದು ಗೋವಾದಲ್ಲಿ ನ್ಯೂ ಇಯರ್ ಪಾರ್ಟಿ ಮಾಡಿದ್ದರು. ಜ.1 ರಂದು ತಿಂಡಿ ಮುಗಿಸಿದ ರಕ್ಷಿತ್, ಚಿದಂಬರಂ ಹಾಗೂ ಪ್ರವೀಣ್ ಗೋವಾದಲ್ಲಿ ತಿರುಗಾಡುತ್ತಿದ್ದರು.‌ ಈ ವೇಳೆ ರಕ್ಷಿತ್‌ಗೆ ದಿಢೀರ್ ಹೃದಯಾಘಾತವಾಗಿದೆ. 

ಕೂಡಲೇ ಸ್ಥಳೀಯ ಆಸ್ಪತ್ರೆಗೆ ಜೊತೆಯಲ್ಲಿದ್ದವರು ಕರೆದೊಯ್ದಿದ್ದರು. ಅಷ್ಟರಲ್ಲಿ ರಕ್ಷಿತ್ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಗೋವಾದಿಂದ ಸ್ವಗ್ರಾಮಕ್ಕೆ ಮೃತದೇಹ ತಂದಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments