Saturday, February 7, 2026
Homeಜಿಲ್ಲಾಸುದ್ದಿಮೂಡಿಗೆರೆ: ಮಲ್ನಾಡ್ ಹಳ್ಳಿ ಕಪ್ ಕ್ರೀಡಾಕೂಟ :ಕಾರ್ತಿಕ್ ಬಿಳ್ಳೂರು ಮಾಲೀಕತ್ವದ ತಂಡಕ್ಕೆ ಪ್ರಥಮ ಸ್ಥಾನ

ಮೂಡಿಗೆರೆ: ಮಲ್ನಾಡ್ ಹಳ್ಳಿ ಕಪ್ ಕ್ರೀಡಾಕೂಟ :ಕಾರ್ತಿಕ್ ಬಿಳ್ಳೂರು ಮಾಲೀಕತ್ವದ ತಂಡಕ್ಕೆ ಪ್ರಥಮ ಸ್ಥಾನ

ಮೂಡಿಗೆರೆ: ತಾಳೂಕಿನ ಬಾಳೆಗದ್ದೆ ಗ್ರಾಮದಲ್ಲಿ ನಡೆದ ಮಲೆನಾಡು ಹಳ್ಳಿ ಕಪ್ ಅವ್ರುತ್ತಿ 8 ರ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಫ್ರೆಂಡ್ಸ್ ಬಿಳ್ಳೂರು ತಂಡವು ಪ್ರಥಮ ಸ್ಥಾನ ಗಳಿಸಿದೆ

ಕಾರ್ತಿಕ್ ತಂಡಕ್ಕೆ ಪ್ರಥಮ ಬಹುಮಾನವಾಗಿ ₹10 ಸಾವಿರ ಮತ್ತು ಟ್ರೋಫಿ, S ಗ್ರೂಪ್ ಬಾಳೆಗದ್ದೆ ತಂಡಕ್ಕೆ ದ್ವಿತೀಯ ಬಹುಮಾನ ₹7 ಸಾವಿರ ಮತ್ತು ಟ್ರೋಫಿ ವಿತರಿಸಲಾಯಿತು. ಒಟ್ಟು 6 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು.

ಬಹುಮಾನ ವಿತರಿಸಿ ಮಾತನಾಡಿದ ಪಂದ್ಯಕೂಟದ ಆಯೋಜಕ ರವಿ ಬಾಳೆಗದ್ದೆ, ಕ್ರೀಡೆಯಲ್ಲಿ ಸೋಲು–ಗೆಲುವು ಸಹಜ. ಸ್ಪರ್ಧಾಳುಗಳು ಕ್ರೀಡಾಸ್ಫೂರ್ತಿ ಬೆಳೆಸಿಕೊಳ್ಳಬೇಕು. ಸೋಲನ್ನು ಗೆಲುವಾಗಿಸುವತ್ತ ಚಿಂತಿಸಬೇಕೆ ವಿನಃ ವೈರತ್ವ ಸಾಧಿಸುವುದರಲ್ಲಿ ಅರ್ಥವಿಲ್ಲ ಎಂದರು. ಕ್ರೀಡೆ ಸ್ನೇಹ ವೃದ್ಧಿಗೆ ಸಾಕ್ಷಿಯಾಗಿದ್ದು ಕ್ರಿಕೆಟ್ ಕೂಟ ಎಂದು ಭಾವಿಸದೆ ಸ್ನೇಹ ಕೂಟ ಎಂದು ತಿಳಿದುಕೊಳ್ಳಬೇಕು ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!