Sunday, August 16, 2026
Homeಕ್ರೈಮ್ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯಕ್ಕೆ ಮತ್ತೊಂದು ಜೀವ ಬಲಿ: ನಾಲ್ಕು ದಿನದ ಅಂತರದಲ್ಲಿ 2ನೇ ಸಾವು!

ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯಕ್ಕೆ ಮತ್ತೊಂದು ಜೀವ ಬಲಿ: ನಾಲ್ಕು ದಿನದ ಅಂತರದಲ್ಲಿ 2ನೇ ಸಾವು!

Telegram Group
Join Now

ಚಿಕ್ಕಮಗಳೂರು : ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಮತ್ತೆ ಮುಂದುವರೆದಿದ್ದು ನಾಲ್ಕು ದಿನದ ಅಂತರದಲ್ಲಿ ಮತ್ತೊಂದು ಜೀವ ಬಲಿಯಾಗಿದೆ. ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಮತ್ತೊಮ್ಮೆ ಈಗ ಬಯಲಾಗಿದೆ. ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಸಕಾಲದಲ್ಲಿ ಚಿಕಿತ್ಸೆ ದೊರಕದೆ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ.

ಹೌದು .. ಲಕ್ಷ್ಮಿಪುರ ಗ್ರಾಮದ ನಿವಾಸಿ ಮಂಜುನಾಥ್ (60) ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ಬಂದಿದ್ದರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಸಿಗದೇ ಸ್ಟ್ರೆಚ್ಚರ್ ಮೇಲೆ‌ ರೋಗಿಯು ನರಳಾಟ ಅನುಭವಿಸಿದರು. ಈ ಪೇಷೆಂಟ್‌ ಆಸ್ಪತ್ರಗೆ ಬಂದು ಒಂದು ಗಂಟೆ ಕಳೆದರೂ ಚಿಕಿತ್ಸೆ ಸಿಗದೆ ಪರದಾಡುವ ಸ್ಥಿತಿ ಕಂಡುಬಂದಿದೆ.

ಸರ್ಕಾರಿ ಜಿಲ್ಲಾಸ್ಪತ್ರೆ ವೈದ್ಯರು ಮೊಬೈಲ್ ನಲ್ಲಿ ಮಾತನಾಡುತ್ತಾ ಕುಳಿತಿದ್ದು ಈ ರೋಗಿಯೂ ನರಳುತ್ತಿದ್ದರು ಸಹ ತಿರುಗಿ ನೋಡದೇ ನಮ್ಗೆ ಸಂಬಂಧ ಇಲ್ಲದ ಹಾಗೆ ಅವರ ಕೆಲಸವನ್ನ ಅವರು ಮಾಡುತ್ತಿದ್ದರು.ಆಸ್ಪತ್ರೆಗೆ ಬಂದು ಒಂದು ಗಂಟೆ ಕಳೆದರೂ ಚಿಕಿತ್ಸೆ ಸಿಗದೆ ರೋಗಿ ಪರದಾಟ ಅನುಭವಿಸುತ್ತಲೇ ಇದ್ದರು.

ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ‌ಸಿಗದೆ ಪರದಾಟ ನಡೆಸುತ್ತಿದ್ದು ತಡವಾಗಿ ಐಸಿಯುವಿಗೆ ದಾಖಲಿಸಿ ಚಿಕಿತ್ಸೆ ನೀಡಿದ ಪರಿಣಾಮ ಮಂಜುನಾಥ್‌ ಅವರು ತೀವ್ರ ಉಸಿರಾಟದ ತೊಂದರೆಯಿಂದ ಬಳಲಿ ಪ್ರಾಣ ಬಿಟ್ಟಿದ್ದಾರೆ.

ವೈದ್ಯರ ನಿರ್ಲಕ್ಷ್ಯದಿಂದ ಮಂಜುನಾಥ್ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ತವ್ಯ ಲೋಪ ಎಸಗಿದ ವೈದ್ಯರು ಹಾಗೂ ಸಿಬ್ಬಂದಿಯನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಪಟ್ಟುಹಿಡಿದಿದ್ದಾರೆ.

ಕಳೆದ ಗುರುವಾರ ಅಷ್ಟೇ ಲಕ್ಷ್ಮಣ್‌ ಎಂಬುವರು ಸಹ ವೈದ್ಯರ ನಿರ್ಲಕ್ಷ್ಯದಿಂದ ಸಕಾಲದಲ್ಲಿ ಚಿಕಿತ್ಸೆ ದೊರಕದೆ ಮೃತಪಟ್ಟಿದ್ದರು.

ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಇಂತಹ ಬೇಜವಾಬ್ದಾರಿ ಕೆಲಸಗಳು ಇತ್ತೀಚೆಗೆ ಆಗ್ತಾನೆ ಇದ್ದೂ ವೈದ್ಯರುಗಳ ಯಡವಟ್ಟಿನಿಂದ ಜನಸಾಮಾನ್ಯರು ಯಾಕೆ ಬಲಿಪಶುಗಳಾಗೋದು ಇದಕ್ಕೆಲ್ಲಾ ಮುಕ್ತಿ ಸಿಗೋದು ಯಾವಾಗ ವೈದ್ಯರು ಹಾಗೂ ಸಿಬ್ಬಂದಿಗಳ ವಿರುದ್ಧ ಕಠೀಣ ಕ್ರಮ ತೆಗೆದುಕೊಳ್ಳಬೇಕೆಂದು ಪಬ್ಲಿಕ್‌ ಇಂಪ್ಯಾಕ್ಟ್‌ ಮೂಲಕ ಆಗ್ರಹಿಸಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments