ಮೂಡಿಗೆರೆ: ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂ ಕಬಳಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿ ಒಂದು ಕಡೆ ಅರಣ್ಯ ಸಂರಕ್ಷಣೆ ನಡೆಯುತ್ತಿದ್ದರೆ ಇನ್ನೊಂದೆಡೆ ಅರಣ್ಯ ಒತ್ತುವರಿ ಮಿತಿ ಮೀರುತ್ತಿದೆ. ಲಕ್ಷಾಂತರ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದರೂ ತೆರವು ಆಗಿರುವುದು ಮಾತ್ರ ಅಲ್ಪ. ರಾಜ್ಯದಲ್ಲಿ 40,67,823 ಹೆಕ್ಟೇರ್ ಅಧಿಸೂಚಿತ ಅರಣ್ಯ ಪ್ರದೇಶವಿದೆ. 1,22,210 ಪ್ರಕರಣಗಳಲ್ಲಿ 2,15,393 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಈ ಪೈಕಿ ಅಂದಾಜು 30 ಸಾವಿರ ಎಕರೆ ಒತ್ತುವರಿ ತೆರವು ಮಾಡಲಾಗಿದೆ. 3 ಎಕರೆಗಿಂತಲೂ ಕಡಿಮೆ ಭೂಮಿ ಇರುವ ಬಡ ರೈತರಿಗೆ ತೊಂದರೆ ಆಗದ ರೀತಿಯಲ್ಲಿ ಹಾಗೂ 3 ಎಕರೆಗಿಂತಲೂ ಹೆಚ್ಚು ಅರಣ್ಯ ಒತ್ತುವರಿ ಮಾಡಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಸ್ಪಷ್ಟನೆ ನೀಡುತ್ತಾ ಬಂದಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕಾಡಂಚಿನ ಭಾಗಗಳಾದ ಹೊಸಕೆರೆ, ಕುಂಬರಡಿ, ಸತ್ತಿಗನಹಳ್ಳಿ ಗ್ರಾಮಗಳಲ್ಲಿ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಪ್ರಭಾವಿ ವ್ಯಕ್ತಿಗಳಿಂದ ಲಂಚ ಪಡೆದು ಭೂ ರಕ್ಷಕರೇ ಭಕ್ಷಣೆಗೆ ಮುಂದಾದರೆ ಎಂಬ ಯಕ್ಷ ಪ್ರಶ್ನೆ ಜೊತೆಗೆ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಹೌದು.. ತಾಲೂಕಿನ ಕುಂಬರಡಿ ಸುತ್ತಲೂ ಕೆಲ ಪ್ರಭಾವಿಗಳು 200 ಎಕರೆ ಜಾಗಕ್ಕೆ ದಾಖಲಾತಿ ತೋರಿಸಿ ಸಾವಿರಾರು ಎಕರೆ ಭೂಮಿಗೆ ಬೇಲಿ ಹೊಡೆಯುತ್ತಿದ್ದೂ ಅಲ್ಲಿಗೆ ಸ್ಥಳೀಯರು ಬಾರದಂತೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಕಾಡನ್ನು ಸಂಪೂರ್ಣ ವಶಪಡಿಸಿಕೊಳ್ಳುವ ಭೂ ಗಳ್ಳರ ಯೋಚನೆಗೆ ಸರಿಯಾದ ಕ್ರಮ ಕೈಗೊಳ್ಳದೆ ಅರಣ್ಯ ಇಲಾಖೆ ಅವರ ತಾಳಕ್ಕೆ ಕುಣಿಯುತ್ತಿದೆ.
ರಾಜ್ಯದಲ್ಲಿ ಒಂದು ಕಡೆ ಅರಣ್ಯ ಸಂರಕ್ಷಣೆ ನಡೆಯುತ್ತಿದ್ದರೆ ಇನ್ನೊಂದೆಡೆ ಅರಣ್ಯ ಒತ್ತುವರಿ ಮಿತಿ ಮೀರುತ್ತಿದೆ. ಲಕ್ಷಾಂತರ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದರೂ ತೆರವು ಆಗಿರುವುದು ಮಾತ್ರ ಅಲ್ಪ.
ರಾಜ್ಯದಲ್ಲಿ 40,67,823 ಹೆಕ್ಟೇರ್ ಅಧಿಸೂಚಿತ ಅರಣ್ಯ ಪ್ರದೇಶವಿದೆ. ಅರಣ್ಯ ಭೂಮಿ ಒತ್ತುವರಿಯಾಗಿದೆ. ಈ ಪೈಕಿ ಅಂದಾಜು 30 ಸಾವಿರ ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಇದರಲ್ಲಿ ಬಡ ಕುಟುಂಬದ ರೈತ ಕುಟುಂಬದ ಪಸಲು ಭೂಮಿಯೇ ಹೆಚ್ಚು ತೆರವು ಗೊಳಿಸಿದ್ದಾರೆ ಎಂಬುದು ಅಷ್ಟೇ ಸತ್ಯ. ಬಲಡ್ಯಾರ ಭೂಮಿ ಮುಟ್ಟದೆ ಬಡವರ ಭೂಮಿ ಇವರ ಕಣ್ಣಿಗೆ ಬೀಳುತ್ತದೆ ಜೊತೆಗೆ ಗಾಂಜಾ ಬೆಳೆದು ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು ಎಂಬುದಾಗಿ ಸ್ಥಳೀಯರು ದೂರಿದ್ದಾರೆ.
ತಾಲೂಕಿನ ಸುತ್ತ ಮುತ್ತ ಪ್ರಭಾವಿಗಳ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯ ವಿಳಂಬ ವಾಗುತ್ತಿರುವುದು ಯಾಕೆ ಎಂಬ ಪ್ರಶ್ನೆ ಮೂಡುತ್ತಿದ್ದೂ ಅಧಿಕಾರಿಗಳೇ ಶಾಮಿಲು ಎದ್ದು ಕಾಣುತ್ತಿದೆ.
ಪ್ರಭಾವಿ ವ್ಯಕ್ತಿಗಳ ಭಯಕ್ಕೆ ಒತ್ತುವರಿ ತೆರವು ನೆನಗುದಿಗೆ ಬಿದ್ದಿದೆ ಎಂಬ ಮಾತು ಕೇಳಿ ಬರುತ್ತಿದೆ.
ಸ್ಥಳೀಯ ಭಾಗದಲ್ಲಿ ಕಾಡು ಪ್ರಾಣಿಗಳ ಬೇಟೆ ಆಡಿ ಪ್ರಭಾವಿಗಳ ಮೋಜು ಮಸ್ತಿ ಮಾಡಿ ಹೋಗುತ್ತಿದ್ದೂ ಇದೆಲ್ಲಾದ್ದಕ್ಕೂ ಕಡಿವಾಣ ಹಾಕಬೇಕು ಎಂದು ಈ ಮೂಲಕ ಸ್ಥಳಿಯರು ಆಗ್ರಹಿಸುತ್ತಿದ್ದಾರೆ.
