Tuesday, August 11, 2026
Homeಜಿಲ್ಲಾಸುದ್ದಿಮೂಡಿಗೆರೆ: ಜೆಸಿಐ ಜನ್ನಾಪುರ ಸಮೃದ್ಧಿಯ ವತಿಯಿಂದ ಅಂಗಡಿ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ಮೂಡಿಗೆರೆ: ಜೆಸಿಐ ಜನ್ನಾಪುರ ಸಮೃದ್ಧಿಯ ವತಿಯಿಂದ ಅಂಗಡಿ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

Telegram Group
Join Now

ಮೂಡಿಗೆರೆ: ಜೆಸಿಐ ಜನ್ನಾಪುರ ಸಮೃದ್ಧಿಯ ವತಿಯಿಂದ ತಾಲೂಕಿನ ಗೋಣಿಬೀಡು ಹೋಬಳಿಯ ಜನ್ನಾಪುರ ಅಂಗಡಿ ಸರ್ಕಾರಿ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜೆಸಿಐ ಜನ್ನಾಪುರ ಸಮೃದ್ಧಿ ಅಧ್ಯಕ್ಷ ಪ್ರಹ್ಲಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸ್ವಾಮಿ ವಿವೇಕಾನಂದರನ್ನು ತಿಳಿಯಲು ಮತ್ತೊಬ್ಬ ವಿವೇಕಾನಂದ ಹುಟ್ಟಿ ಬರಬೇಕಾಗುತ್ತದೆ ಎಂದು ಹೇಳಿದರು.

ವಿವೇಕನಾಂದರು ಹೊಂದಿರುವ ಜ್ಞಾನವನ್ನು ಮತ್ತೆ ಯಾರೂ ಹೊಂದಿರಲಿಲ್ಲ. ಅದಕ್ಕೆ ಅವರನ್ನು ತಿಳಿದುಕೊಳ್ಳಬೇಕೆಂದರೆ ಮತ್ತೊಬ್ಬ ವಿವೇಕಾನಂದರು ಹುಟ್ಟ ಬೇಕಾಗುತ್ತದೆ ಎಂದು ಹೇಳಿದರು.

ಇಂದಿನ ಯುವ ಪೀಳಿಗೆ ಹೆಚ್ಚು ಪುಸ್ತಕಗಳನ್ನು ಓದಬೇಕು. ಮಹಾನಾಯಕರ ಆದರ್ಶ ರೂಡಿಸಿಕೊಳ್ಳಬೇಕು ಎಂದರು. ಎಲ್ಲರನ್ನು ಪ್ರೀತಿಯಿಂದ ಕಾಣಬೇಕು ಹೊಟ್ಟೆಕಿಚ್ಚು ಎಂಬುದು ಅಸಮರ್ಥರ ಭಾಗವಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಜೆಸಿಐ ಸ್ಥಾಪಕ ಅಧ್ಯಕ್ಷ ಸಂತೋಷ್, 2026 ನೇ ಜೆಸಿಐ ನೂತನ ಅಧ್ಯಕ್ಷ ಪ್ರದೀಪ್, ಅಂಗಡಿ ಶಾಲೆಯ ಮುಖ್ಯ ಉಪಧ್ಯಾಯರು ಸಹ ಶಿಕ್ಷಕರು ಸೇರಿದಂತೆ ಮಕ್ಕಳು ಪೋಷಕಲು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments