Sunday, August 16, 2026
Homeಕ್ರೈಮ್ಚಿಕ್ಕಮಗಳೂರು: ಕಾಫಿನಾಡಿಗರೇ ಎಚ್ಚರ: ರಾತ್ರಿ ವೇಳೆ ಮಚ್ಚು, ರಾಡ್ ಹಿಡಿದು ಕಳ್ಳರ ಗ್ಯಾಂಗ್ ಆಕ್ಟೀವ್‌!

ಚಿಕ್ಕಮಗಳೂರು: ಕಾಫಿನಾಡಿಗರೇ ಎಚ್ಚರ: ರಾತ್ರಿ ವೇಳೆ ಮಚ್ಚು, ರಾಡ್ ಹಿಡಿದು ಕಳ್ಳರ ಗ್ಯಾಂಗ್ ಆಕ್ಟೀವ್‌!

Telegram Group
Join Now

ಚಿಕ್ಕಮಗಳೂರ: ಕಾಫಿನಾಡಲ್ಲಿ ರಾತ್ರಿ ವೇಳೆ ಮಚ್ಚು, ರಾಡ್ ಹಿಡಿದು ರಾಬರಿ ಮಾಡೋ ಕಳ್ಳರ ಗ್ಯಾಂಗ್ ಆಕ್ಟೀವ್‌ ಆಗಿದೆ.

ಗುರುತು ಸಿಗದಂತೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಆಯುಧ ಸಮೇತ ಗ್ಯಾಂಗ್‌ ಓಡಾಡುತ್ತಿದೆ. ಇದರಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ಓಡಾಡುವ ವೇಳೆ ಶಬ್ಧ ಬರಬಾರದೆಂದು ಚಪ್ಪಲಿಯನ್ನೂ ಹಾಕದೆ ಕಳ್ಳರು ಓಡಾಡುತ್ತಿದ್ದಾರೆ.

ನಗರದ ಪವಿತ್ರವನ, ಟೀಚರ್ಸ್ ಕಾಲೋನಿಯಲ್ಲಿ ಐವರ ಗ್ಯಾಂಗ್ ರಾತ್ರಿ ವೇಳೆ ನಿರಂತರವಾಗಿ ಸಂಚಾರಿಸುತ್ತಿದೆ. ಈಗಾಗಲೇ 4 ಮನೆಗಳಲ್ಲಿ ಕಳ್ಳತನ ಮಾಡಿದ್ದಾರೆ. ಈ ಗ್ಯಾಂಗ್‌ನಲ್ಲಿದ್ದವರು ಆಂಧ್ರ ಮೂಲದವರು ಎಂಬ ಮಾಹಿತಿ ಇದೆ.

ಕಳ್ಳತನ ಪ್ರಕರಣಕ್ಕೆ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ. ಪೊಲೀಸರು ಕಳ್ಳರ ಪತ್ತೆಗೆ ಮುಂದಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments