Thursday, March 26, 2026
Homeಜಿಲ್ಲಾಸುದ್ದಿಮೂಡಿಗೆರೆ: ಪಟ್ಟಣಕ್ಕೆ ಬರುವವರಿಗೆ ಸ್ವಾಗತ ಕೋರುತ್ತಿವೆ ಕಸದ ರಾಶಿ: ಕಣ್ಮುಚ್ಚಿ ಕುಳಿತ ಗ್ರಾಮ ಪಂಚಾಯಿತಿ!

ಮೂಡಿಗೆರೆ: ಪಟ್ಟಣಕ್ಕೆ ಬರುವವರಿಗೆ ಸ್ವಾಗತ ಕೋರುತ್ತಿವೆ ಕಸದ ರಾಶಿ: ಕಣ್ಮುಚ್ಚಿ ಕುಳಿತ ಗ್ರಾಮ ಪಂಚಾಯಿತಿ!

ಮೂಡಿಗೆರೆ ಹಾಗೂ ಹಾಸನ ಮಂಗಳೂರು ಮಾರ್ಗದ ಹೆದ್ದಾರಿಯ ಅಕ್ಕ ಪಕ್ಕ ಸ್ವಚ್ಛತೆ ಮರಿಚೀಕೆಯಾಗಿದೆ. ಜೇನುಬೈಲು ಅರಣ್ಯ ಪ್ರದೇಶದ ಬಳಿ ಹಾಗೂ ಹ್ಯಾಂಡ್ ಪೋಸ್ಟ್ ಬಿದರಹಳ್ಳಿ ರಸ್ತೆಯಲ್ಲಿ ಕಸದ ರಾಶಿ ಎದ್ದು ಕಾಣುತ್ತಿದ್ದೂ ಮೂಡಿಗೆರೆ ಪಟ್ಟಣಕ್ಕೆ ಬರುವವರಿಗೆ ಕಸದ ರಾಶಿ ಸ್ವಾಗತ ಕೋರುತ್ತಿದ್ದೂ ಸ್ಥಳೀಯರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ

ಹೌದು ರಾಷ್ಟ್ರೀಯ ಹೆದ್ದಾರಿ ಯಾವುದೇ ಗ್ರಾಮದ ಬಳಿ ಹಾದು ಹೋದರೆ ಆ ಗ್ರಾಮ ಸಹಜವಾಗಿಯೇ ಅಭಿವೃದ್ಧಿ ಪಥದತ್ತ ಸಾಗುತ್ತದೆ. ಇಲ್ಲಿ ಅಭಿವದ್ಧಿ ಮತ್ತು ಸ್ವಚ್ಛತೆ ಮರಿಚೀಕೆಯಾಗಿದೆ. ಬಿದರಹಳ್ಳಿ, ಚಿನ್ನಿಗ ಹಳೇ ಮೂಡಿಗೆರೆ ವ್ಯಾಪ್ತಿಯ ಹೆದ್ದಾರಿಯ ಇಕ್ಕೆಲ್ಲಗಳಲ್ಲಿಯೂ ಕಸದ ರಾಶಿ ಕಣ್ಣಿಗೆ ರಾಚುತ್ತದೆ. ಪ್ರವಾಸಿಗರು ಬೇಕಾಬಿಟ್ಟೆ ವಾಹನ ನಿಲ್ಲಿಸಿ ಆಹಾರ ಸೇವನೆ ಬಳಿಕ ಮನ ಬಂದಂತೆ ರಸ್ತೆ ಬದಿಗಳಲ್ಲಿ ತ್ಯಾಜ್ಯ ಬಿಸಾಕುವುದರಿಂದ ತೊಂದರೆ ಯಾಗುತ್ತಿದೆ ಎಂದು ಸುತ್ತ ಮುತ್ತಲಿನ ಗ್ರಾಮಸ್ಥರು ದೂರಿದ್ದಾರೆ.. ಜೇನುಬೈಲ್ ಗ್ರಾಮದ ಸಂದೀಪ್ ಎಂಬುವರು ಸಾಮಾಜಿಕ ಕಳಕಳಿಯಿಂದ ತಮ್ಮ ಮನೆಯ ಗೇಟ್ ಬಳಿ ಕಸದ ಡಸ್ಟ್ ಬೀನ್ ಇರಿಸಿದ್ದು ಜನರು ಅದರ ಬಳಕೆ ಮಾಡಿಕೊಳ್ಳದೆ ಡಸ್ಟ್ ಬಿನ್ ಹೊರಗಡೆ ಬಿಸಾಕಿ ಹೋಗುತ್ತಿದ್ದೂ ನೋವಿನ ವಿಚಾರ ವಾಗಿದೆ. ಪ್ರತಿ ದಿನ ಖುದ್ದಾಗಿ ಕಸ ಸುಟ್ಟು ಹಾಕಿಸುತ್ತೇನೆ. ಎಷ್ಟೇ ಮನವರಿಕೆ ಮಾಡಿಕೊಂಡರು ಜನ ಬುದ್ದಿ ಕಲಿಯುವುದಿಲ್ಲ ಎಂಬುದು ಇವರ ದೂರಾಗಿದೆ

ಪ್ರತಿ ದಿನ ನೂರಾರು ಜನರು, ವಾಹನ ಸವಾರರು ತಿರುಗುವ ರಸ್ತೆ ಇದಾಗಿದ್ದು ಇತ್ತೀಚಿನ ದಿನಗಳಲ್ಲಿ ಸಂಖ್ಯೆ ಹೆಚ್ಚುತ್ತಿದೆ. ಮನಬಂದಂತೆ.ಕಸ ಹಾಕುತ್ತಿದ್ದೂ ಹೊತ್ತು ಘಳಿಗೆ ಎಂಬುದು ನೋಡದೆ ಜನ ಬೆಳ್ಳಗೆ ಇಲ್ಲವೇ ರಾತ್ರಿ ಕಸ ಸುರಿಯುತ್ತಿದ್ದಾರೆ ಇದರಿಂದ ದುರ್ವಸನೆ ಬೀರುತ್ತಿದ್ದು ಜಾನುವಾರುಗಳು ಪ್ಲಾಸ್ಟಿಕ್ ತಿಂದು ಸಾಯುತ್ತಿವೆ ಎಂಬುದಾಗಿ ಸ್ಥಳೀಯರು ದೂರಿದ್ದಾರೆ

ಈ ಮಾರ್ಗವಾಗಿ ಹೋಗುವ ಪ್ರವಾಸಿಗರು ಹಾಗೂ ಸಾರ್ವಜನಿಕರ ರಸ್ತೆ ಬದಿ ಕಸ ಬಿಸಾಕಿ
ಬೇಜವಾಬ್ದಾರಿತನ ತೋರುತ್ತಿದ್ದಾರೆ ಅದಲ್ಲದೆ ಗ್ರಾಮ ಪಂಚಾಯಿತಿಗೆ ರಸ್ತೆಯ ಇಕ್ಕೆಲಗಳಲ್ಲಿ ಕಸ ಸುರಿಯಲಾಗುತ್ತಿದೆ ಎಂದು ಪಂಚಾಯಿತಿ ಗಮನಕ್ಕೆ ಹಲವು ಬಾರಿ ತಂದರೂ ಪ್ರಯೋಜನೆ ಇಲ್ಲ. ಇದಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಪಂಚಾಯಿತಿಯವರು ವರ್ತಿಸುತ್ತಿದ್ದಾರೆ. ಇವರ ಬೇಜವಾಬ್ದಾರಿತನದಿಂದ ಗ್ರಾಮದ ಸ್ವಚ್ಛತೆ ಹಾಗೂ ಪರಿಸರ ಹದಗೆಟ್ಟಿದೆ.ಎಂಬುದು ಸ್ಥಳೀಯರ ಮಾತಾಗಿದೆ

ಇನ್ನಾದರೂ ಪರಿಸರ ಹಾಗೂ ಜಾನುವಾರುಗಳ ಹಾಗೂ ಸ್ಥಳೀಯರ ಹಿತೈದೃಷ್ಟಿಯಿಂದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರು ಒತ್ತಾಯಿಸಿದ್ದಾರೆ.

ವರದಿ -ಪುನೀತ್ ಕಡಿದಾಳು

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!