Sunday, August 16, 2026
Homeಜಿಲ್ಲಾಸುದ್ದಿತರೀಕೆರೆ: ಎಂಎಸ್‌ಸಿ ಪರಿಸರ ವಿಜ್ಞಾನದಲ್ಲಿ ಸಾಧನೆ ಮಾಡಿದ ಕರಕುಚ್ಚಿಯ ಸ್ವಾತಿ!

ತರೀಕೆರೆ: ಎಂಎಸ್‌ಸಿ ಪರಿಸರ ವಿಜ್ಞಾನದಲ್ಲಿ ಸಾಧನೆ ಮಾಡಿದ ಕರಕುಚ್ಚಿಯ ಸ್ವಾತಿ!

Telegram Group
Join Now

ಚಿಕ್ಕಮಗಳೂರು:  ಎಂಎಸ್‌ಸಿ ಪರಿಸರ ವಿಜ್ಞಾನದಲ್ಲಿ ಸಾಧನೆ ಮಾಡಿರುವ ತರೀಕೆರೆ ತಾಲ್ಲೂಕು ಕರಕುಚ್ಚಿ ಬಿ.ಕಾಲೋನಿಯ ಜಿ.ಎಂ.ಸ್ವಾತಿ ನಾಲ್ಕು ಚಿನ್ನದ ಪದಕ ನಗದು ಬಹುಮಾನಕ್ಕೂ ಭಾಜನಳಾಗಿದ್ದಾಳೆ.

ಕರಕುಚ್ಚಿ ಬಿ.ಕಾಲೋನಿಯ ಜಿ.ಟಿ.ಮಹಂತೇಶ್ ಹಾಗೂ ಅವರು ಜನವರಿ ೫ ರಂದು ನಡೆದ ಮೈಸೂರು ವಿಶ್ವ ವಿದ್ಯಾನಿಲಯ ೧೦೬ನೇ ವಾರ್ಷಿಕ ಘಟಿಕೋತ್ಸವದಲ್ಲಿ ಎಂ.ಎಸ್.ಸಿ ಪರಿಸರ ವಿಜ್ಞಾನದಲ್ಲಿ ೪ ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದಿದ್ದಾಳೆ.

ಈಕೆ ಜಿ.ಟಿ.ಮಹಾಂತೇಶ್ ಹಾಗೂ ಕರಕುಚ್ಚಿ ಬಿ.ಕಾಲೋನಿಯ ಅಂಗನವಾಡಿ ಕಾರ್ಯಕರ್ತೆ ಕೆ.ಎಸ್.ಸವಿತ ಅವರ ಪುತ್ರಿ.

ಹೆಚ್.ಆರ್.ಬಸವರಾಜು ಜೆಮಿನಿ ಡಿಸ್ಟಿಲರೀಸ್ ದತ್ತಿ ಚಿನ್ನದ ಪದಕ, ಜಿಂದಾಲ್ ಜುಬಿಲಿ ದತ್ತಿ ಚಿನ್ನದ ಪದಕ, ಲೇ.ಬಿ.ಬಸವಲಿಂಗಪ್ಪ ಸ್ಮರಣಾರ್ಥ ಟ್ರಸ್ಟ್ ದತ್ತಿ ಚಿನ್ನದ ಪದಕ ಹಾಗೂ ಶ್ರೀಮತಿ ಮೀನಾಕ್ಷಮ್ಮ ಚಂದ್ರಶೇಖರ್ ಚಿನ್ನದ ಪದಕ ಹಾಗೂ ಶ್ರೇಷ್ಠತೆಗಾಗಿ ಶ್ರೀಮೂರ್ತಿಯವರ ನಗದು ಬಹುಮಾನ ಆಕೆಗೆ ದೊರೆತಿದೆ ಎಂದು ತರೀಕೆರೆ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments