ಚಿಕ್ಕಮಗಳೂರು: ಮಾದಕ ವಸ್ತುಗಳ ಸಾಗಾಟ/ಸರಬರಾಜು, ಮಾರಾಟ ಹಾಗೂ ಸೇವನೆ ಪ್ರಕರಣಗಳಲ್ಲಿ ಆರೋಪಿತನಾಗಿದ್ದ ನದೀಮ್ ಖಾನ್‌ನನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ .
ಇಲ್ಲಿನ ಗೌರಿ ಕಾಲುವೆ ಹಿಟ್ಟಿನ ಮೇಲಿನ ಹತ್ತಿರ ವಾಸವಾಗಿದ್ದ ನದೀಮ್ ಖಾನ್ (31) ಮಾದಕ ವಸ್ತುಗಳ ಸಂಗ್ರಹಣೆ ಸಾಗಾಟ/ಸರಬರಾಜು, ಮಾರಾಟ ಮತ್ತು ಸೇವನೆ ಮಾಡುವ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದ.
ವೃತ್ತಿಪರ ಡ್ರಗ್ಸ್ ಪೆಡ್ಲರ್ ಆಗಿದ್ದ ಈತನ ವಿರುದ್ಧ ೪ ಮಾದಕ ವಸ್ತುಗಳ ಸಂಗ್ರಹಣೆ, ಸಾಗಾಟ/ಸರಬರಾಜು, ಮಾರಾಟ ಪ್ರಕರಣಗಳು ದಾಖಲಾಗಿತ್ತು. ಒಂದು ಪ್ರಕರಣದಲ್ಲಿ ಈತನಿಗೆ ಶಿಕ್ಷೆಯಾಗಿದೆ .೩ ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿವೆ.
ಒಂದು ಎನ್ ಡಿವಿಎಸ್ ಸೇವನೆ ಪ್ರಕರಣ ದಾಖಲಾಗಿ ಈ ಪ್ರಕರಣದಲ್ಲಿಯೂ ಈತನಿಗೆ ಶಿಕ್ಷೆಯಾಗಿದೆ. ಆರೋಪಿಯು ಸಮಾಜದ ಸ್ವಾಸ್ಥ್ಯ ಕೆಡಿಸುತ್ತ ನಿರಂತರವಾಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು,ಈತನನ್ನು ಕೆಂದ್ರ ಕಾರಾಗೃಹ ಬಳ್ಳಾರಿ ಇಲ್ಲಿ ಒಂದು ವರ್ಷಗಳ ಅವಧಿಗೆ ಬಂಧನದಲ್ಲಿ ಇಡಲು ಆದೇಶದ ಹಿನ್ನೆಲೆಯಲ್ಲಿ ಬಳ್ಳಾರಿ ಕಾರಾಗೃಹಕ್ಕೆ ಒಪ್ಪಿಸಲಾಗಿದೆ.
