Tuesday, August 11, 2026
Homeಕ್ರೈಮ್ಹಾಸನ: ರಸ್ತೆ ಮಧ್ಯೆ ವ್ಹೀಲಿಂಗ್‌ ನಡೆಸಿದ ಪುಂಡರಿಬ್ಬರು: ವಾಹನ ಸವಾರರಿಗೆ ಕಿರಿಕಿರಿ

ಹಾಸನ: ರಸ್ತೆ ಮಧ್ಯೆ ವ್ಹೀಲಿಂಗ್‌ ನಡೆಸಿದ ಪುಂಡರಿಬ್ಬರು: ವಾಹನ ಸವಾರರಿಗೆ ಕಿರಿಕಿರಿ

Telegram Group
Join Now

ಹಾಸನ: ಪುಂಡರಿಬ್ಬರು ರಸ್ತೆ ಮಧ್ಯೆ ವ್ಹೀಲಿಂಗ್‌ ಮಾಡಿ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿರುವ ಘಟನೆ ಅರಸೀಕೆರೆ ತಾಲೂಕಿನ ಮುದುಡಿ ರಸ್ತೆಯಲ್ಲಿ ನಡೆದಿದೆ.

ವೀಲ್ಹಿಂಗ್ ಮಾಡುತ್ತಲೇ ಬೈಕ್‍ನಲ್ಲಿ ಇಬ್ಬರು ಯುವಕರು ತೆರಳಿದ್ದಾರೆ. ಒಂದೇ ಚಕ್ರದಲ್ಲಿ ಬೈಕ್ ಓಡಿಸಿದ್ದು ಇನ್ನೋರ್ವ ಹೆದರದೆ ಹಿಂಬದಿ ಕುಳಿತಿದ್ದಾನೆ. ವೀಲ್ಹಿಂಗ್ ಮಾಡುವಾಗ ನಾಯಿ ಅಡ್ಡ ಬಂದಿದ್ದು ಕೂದಲೆಳೆ ಅಂತರದಲ್ಲಿ ಅನಾಹುತ ತಪ್ಪಿದೆ.

ಬೈಕ್‍ಗೆ ನಾಯಿ ಅಡ್ಡ ಬಂದ ಕೂಡಲೇ ಕಾರು ಚಾಲಕ ಅಪಘಾತ ತಪ್ಪಿಸಲು ತಕ್ಷಣವೇ ಕಾರನ್ನು ನಿಲ್ಲಿಸಿದ್ದಾನೆ. ವೀಲ್ಹಿಂಗ್ ಮಾಡುವ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ.

ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments