Wednesday, February 11, 2026
Homeಜಿಲ್ಲಾಸುದ್ದಿಕೇರಳ ರಾಜ್ಯದ ಕಾಂಗ್ರೆಸ್ ಪಕ್ಷದ ಚುನಾವಣ ಉಸ್ತುವಾರಿಯಾಗಿ ಮೂಡಿಗೆರೆಯ ಸಂದೀಪ್ ಬಿ. ಎಂ. ನೇಮಕ

ಕೇರಳ ರಾಜ್ಯದ ಕಾಂಗ್ರೆಸ್ ಪಕ್ಷದ ಚುನಾವಣ ಉಸ್ತುವಾರಿಯಾಗಿ ಮೂಡಿಗೆರೆಯ ಸಂದೀಪ್ ಬಿ. ಎಂ. ನೇಮಕ

ಚಿಕ್ಕಮಗಳೂರು ಜಿಲ್ಲೆಯ ಯುವ ನಾಯಕ AICC ಕಾರ್ಯದರ್ಶಿಗಳಾದ ಸಂದೀಪ್ ಬಿ. ಎಂ. ಅವರನ್ನು ಕೇರಳ ರಾಜ್ಯದ ಕಾಂಗ್ರೆಸ್ ಪಕ್ಷದ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಳಿಸಲಾಗಿದೆ

ಕಾಂಗ್ರೆಸ್ ಹೈ ಕಮಾಂಡ್ ಹಾಗೂ ಹಿರಿಯ ನಾಯಕರು ಮತ್ತು AICC ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ, ಸಿ, ವೇಣುಗೋಪಾಲ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು

ಸಂದೀಪ್ ಅವರ ಕಾರ್ಯಕ್ಷಮಾತೆ, ಪ್ರಾಮಾಣಿಕ ಸೇವೆ ಹಾಗೂ ರಾಜಕೀಯ ಚಾಣಕ್ಯತನದಿಂದಾಗಿ ಈ ಜವಾಬ್ದಾರಿ ಲಭಿಸಿದ್ದಾಗಿ ಕಾಂಗ್ರೆಸ್ ಕಾರ್ಯಕರ್ತರು ಹೇಳಿದ್ದಾರೆ.

ಸಂದೀಪ್ ಮೂಲತ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದವರಾಗಿದ್ದು ಕೇರಳ ರಾಜ್ಯದ ಕಾಂಗ್ರೆಸ್ ಪಕ್ಷದ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡಿರುವುದು ಹುಟ್ಟೂರು ಆದ ಮೂಡಿಗೆರೆಗೆ ಹೆಮ್ಮೆಯೂ ಸಹ ಆಗಿದೆ

ಕರುನಾಡಿನ ಕುವರ ಸಂದೀಪ್ ಕೇರಳ ರಾಜ್ಯದ ಕಾಂಗ್ರೆಸ್ ಪಕ್ಷದ ಚುನಾವಣ ಉಸ್ತುವಾರಿಯಾಗಿ ಆಯ್ಕೆ ಯಾಗಿದ್ದು ಸ್ಥಳೀಯರಲ್ಲಿ ಅಪಾರ ಹರ್ಷ ವ್ಯಕ್ತವಾಗಿದ್ದು ಶುಭಾಶಯಗಳ ಮಹಾಪೂರ ಹರಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!