Monday, July 13, 2026
Homeಜಿಲ್ಲಾಸುದ್ದಿಕೊಟ್ಟಿಗೆಹಾರ: ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ತೆರಳುವವರಿಗೆ ಹಸಿರು ಫೌಂಡೇಶನ್ ವತಿಯಿಂದ ಹಣ್ಣುಗಳ ವಿತರಣೆ!

ಕೊಟ್ಟಿಗೆಹಾರ: ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ತೆರಳುವವರಿಗೆ ಹಸಿರು ಫೌಂಡೇಶನ್ ವತಿಯಿಂದ ಹಣ್ಣುಗಳ ವಿತರಣೆ!

Telegram Group
Join Now

ಕೊಟ್ಟಿಗೆಹಾರ : ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಹಾಸನ ಬೇಲೂರು ಮೂಡಿಗೆರೆ ಕೊಟ್ಟಿಗೆಹಾರ ಮಾರ್ಗವಾಗಿ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುತ್ತಿರುವ ಮಂಜುನಾಥ ಸ್ವಾಮಿಯ ಭಕ್ತಾದಿಗಳಿಗೆ ಹಸಿರು ಫೌಂಡೇಶನ್ ಸಂಸ್ಥೆ ವತಿಯಿಂದ ಹಣ್ಣುಗಳನ್ನು ವಿತರಿಸಲಾಯಿತು ಹಾಗೂ ಭಕ್ತಾದಿಗಳಿಗೆ ಸಾಗುವ ದಾರಿಯ ಪರಿಸರದ ಸ್ವಚ್ಛತೆ ಕಾಪಾಡುವಂತೆ ಅರಿವು ಮೂಡಿಸಲಾಯಿತು.

ಹೌದು .. ನೂರಾರು ವರ್ಷಗಳಿಂದ ಧರ್ಮಸ್ಥಳಕ್ಕೆ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಧರ್ಮಸ್ಥಳದಲ್ಲಿ ಶಿವರಾತ್ರಿ ಆಚರಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಕೂಡ ಇಮ್ಮಡಿಗೊಂಡಿದ್ದು, ಇತ್ತೀಚಿನ ವರ್ಷಗಳಲ್ಲಿ. ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಬೀದರ್‌, ಬಾಗಲಕೋಟೆ ಬಹುತೇಕ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಶಿವರಾತ್ರಿಗೆ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಾರೆ.

ರಾಜ್ಯದ ಯಾವುದೇ ಮೂಲೆಯಿಂದ ಬಂದರೂ ಕೂಡ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ತಪ್ಪಲು ಕೊಟ್ಟಿಗೆಹಾರಕ್ಕೆ ಬರಲೇಬೇಕು. ಹೀಗಾಗಿ  ಸಾವಿರಾರು ಪಾದಯಾತ್ರಿಗಳು ಯಾತ್ರೆ ಕೈಗೊಂಡಿದ್ದು ಭಕ್ತಾದಿಗಳಿಗೆ ಸಾಗುವ ದಾರಿಯ ಪರಿಸರದ ಸ್ವಚ್ಛತೆ ಕಾಪಾಡುವಂತೆ ಹಸಿರು ಫೌಂಡೇಶನ್ ಸಂಸ್ಥೆ ವತಿಯಿಂದ ಹಣ್ಣುಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಹಸಿರು ಫೌಂಡೇಶನ್ ಸಂಸ್ಥಾಪಕರಾದ ರತನ್ ದೇವ್ ಊರುಬಗೆ,
ಕಾರ್ಯದರ್ಶಿ ಅಭಿಜಿತ್ ಹೆಡದಾಳು ನಿರ್ದೇಶಕರಾದ ಪ್ರದೀಪ್ ಊರುಬಗೆ, ಮಲ್ಲೇಶ್ ಬಾನಹಳ್ಳಿ ಮತ್ತಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments