ಚಿಕ್ಕಮಗಳೂರು : ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮವು ಸಂಭ್ರಮದ ಬದಲು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು ಕಂಡುಬಂದಿದೆ.
ಹೌದು .. ಶಾಸಕ ಹೆಚ್.ಡಿ ತಮ್ಮಯ್ಯ ಅವರು ಭಾಷಣ ಮಾಡಲು ಬರುತ್ತಿದ್ದಂತೆ ಬಂಜಾರ ಸಮುದಾಯದ ಮುಖಂಡರು ಏಕಾಏಕಿ ನುಗ್ಗಿ ಗಲಾಟೆ ನಡೆಸಿ ಭಾಷಣಕ್ಕೆ ಅಡ್ಡಿ ಪಡಿಸಿದರು.

ಕಾಂಗ್ರೆಸ್ ಸರ್ಕಾರವು ಒಳ ಮೀಸಲಾತಿಯಲ್ಲಿ ಮೋಸ ಮಾಡ್ತಿದೆ ಸರ್ಕಾರ, ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು ಹಾಗೆ ಪ್ರತಿಭಟನಾಕಾರರನ್ನ ಕಾರ್ಯಕ್ರಮದಿಂದ ಹೊರದಬ್ಬಿದ್ದ ಪೊಲೀಸರು.

ಈ ವೇಳೆ ಹೊರಗೆ ಹೋಗಿದ್ದವರನ್ನ ಸಮಾಧಾನ ಮಾಡಿ ಹಾಗೆ ಪ್ರಜಾಪ್ರಭುತ್ವದಲ್ಲಿ ಮಾತಾಡೋದೇ ತಪ್ಪಾ ಎಂದು ಸಿಟಿ ರವಿ ಪ್ರಶ್ನೆ ಮಾಡಿದರು.
