Tuesday, October 13, 2026
Homeಜಿಲ್ಲಾಸುದ್ದಿಮೆಕ್ಕೆಜೋಳಕ್ಕೆ ಬಿಳಿ ಸುಳಿ ರೋಗ ಬಾಧೆ: ರೈತರ ಪರ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರಿಗೆ ಶಾಸಕ...

ಮೆಕ್ಕೆಜೋಳಕ್ಕೆ ಬಿಳಿ ಸುಳಿ ರೋಗ ಬಾಧೆ: ರೈತರ ಪರ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರಿಗೆ ಶಾಸಕ ಸಿಮೆಂಟ್ ಮಂಜು ದೂರವಾಣಿ ಕರೆ

Telegram Group
Join Now

ಹಾಸನ:ಜಿಲ್ಲೆಯಲ್ಲಿ ಮುಸುಕಿನ ಜೋಳಕ್ಕೆ (ಮೆಕ್ಕೆಜೋಳ) ತೀವ್ರವಾಗಿ ಆವರಿಸಿರುವ ‘ಬಿಳಿ ಸುಳಿ ರೋಗ’  ದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಈ ಶಿಲೀಂಧ್ರ ರೋಗದಿಂದಾಗಿ ಬೆಳೆಯ ಎಲೆಗಳು ಬಿಳಿಯಾಗಿ ಸುರುಳಿಯಾಗಿ ಬೆಳೆ ಕುಂಠಿತಗೊಳ್ಳುತ್ತದೆ. ಇದರಿಂದಾಗಿ ರೈತರು ಸಂಪೂರ್ಣ ನಷ್ಟದ ಭೀತಿಯನ್ನು ಅನುಭವಿಸುತ್ತಿದ್ದಾರೆ.

ಈ ವೇಳೆ ಮೆಕ್ಕೆಜೋಳಕ್ಕೆ ಬಿಳಿ ಸುಳಿ ರೋಗ ಬಾಧೆಯಿಂದ ಬಳಲುತ್ತಿದ್ದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಶಾಸಕ ಸಿಮೆಂಟ್ ಮಂಜು ಆಗ್ರಹ ಪಡಿಸಿದ್ದು ಹಾಗೆ ರೈತರ ಪರ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರಿಗೆ ಶಾಸಕ ಸಿಮೆಂಟ್ ಮಂಜು ದೂರವಾಣಿ ಕರೆ ಮಾಡಿ ಬೆಳೆಹಾನಿ ಸಮೀಕ್ಷೆ ನಡೆಸಿ ತಕ್ಷಣ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡರು.

ಜಿಲ್ಲೆಯಲ್ಲಿ ಶೇ.60ಕ್ಕೂ ಹೆಚ್ಚು ಮೆಕ್ಕೆಜೋಳ ಬೆಳೆ ಹಾನಿ ಸಂಭವಿಸಿದ್ದು  ಶಾಸಕ ಸಿಮೆಂಟ್ ಮಂಜು
ಒಂದು ಎಕರೆಗೆ ₹25–30 ಸಾವಿರ ವೆಚ್ಚ ಸಂಪೂರ್ಣ ಬೆಳೆ ನಾಶದಿಂದ ರೈತರಿಗೆ ಭಾರೀ ನಷ್ಟವಾಗಿದ್ದು ರೋಗಬಾಧಿತ ಜೋಳ ಜಾನುವಾರುಗಳ ಮೇವಿಗೂ ಬಳಕೆಯಾಗದ ಪರಿಸ್ಥಿತಿ ಬೆಳೆಹಾನಿ ಸಮೀಕ್ಷೆ ನಡೆಸಿ ತಕ್ಷಣ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಲ್ಲದೇ ಸ್ವತಃ ಜಮೀನುಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸುವಂತೆ ಸಚಿವರಿಗೆ ಆಗ್ರಹ ಪಡಿಸಿದರು.

ಹಾಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಸ್ಥಳ ಪರಿಶೀಲನೆ ಮಾಡೋದಾಗಿ ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು. ಅದರ ಜೊತೆ ಮೆಕ್ಕೆಜೋಳ ಬೆಳೆಗಾರರಿಗೆ ಸೂಕ್ತ ಪರಿಹಾರ ಮತ್ತು ಅಗತ್ಯ ನೆರವು ನೀಡಲು ಒತ್ತಾಯ ಕೂಡ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!