Tuesday, October 13, 2026
Homeಕ್ರೈಮ್ಕೊಪ್ಪ: ತಾಯಿ ಬೈದಿದ್ದಕ್ಕೆ 7ನೇ ತರಗತಿ ಬಾಲಕಿ ಆತ್ಮಹತ್ಯೆ

ಕೊಪ್ಪ: ತಾಯಿ ಬೈದಿದ್ದಕ್ಕೆ 7ನೇ ತರಗತಿ ಬಾಲಕಿ ಆತ್ಮಹತ್ಯೆ

Telegram Group
Join Now

ಚಿಕ್ಕಮಗಳೂರು: ಊಟ ಮಾಡುವಾಗ ಅನ್ನ ಚೆಲ್ಲಿದ್ದಕ್ಕೆ ತಾಯಿ ಬುದ್ದಿವಾದ ಹೇಳಿದ್ರು ಎಂದು ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಸರಿಕಟ್ಟೆಯಲ್ಲಿ ನಡೆದಿದೆ.

ಹೌದು, 7ನೇ ತರಗತಿ ಓದುತ್ತಿದ್ದ 13 ವರ್ಷದ ಸುಪ್ರಿತಾ ಮೃತ ಬಾಲಕಿ. ಬರೀ ಟಿವಿ ನೋಡ್ತೀಯಾ, ಮೊದಲು ಚೆಲ್ಲಿರೋ ಅನ್ನ ಕ್ಲೀನ್ ಮಾಡು ಅಂತಾ ತಾಯಿ ಬುದ್ದಿವಾದ ಹೇಳಿ ಬೆಳಗ್ಗೆ ಕೆಲಸಕ್ಕೆ ಹೋಗಿದ್ರಂತೆ. ಆ ಬಳಿಕ ತಾಯಿಯ ಮಾತಿಗೆ ಬೇಸರ ಮಾಡಿಕೊಂಡು, ವೇಲ್ ನಿಂದ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ. ಸಂಜೆ ತಾಯಿ ಮನೆಗೆ ಬಂದು ನೋಡುವಾಗ ಪ್ರಕರಣ ಬೆಳಕಿಗೆ ಬಂದಿದೆ.

ಮೃತ ಬಾಲಕಿ ತಾಯಿ ಸರೋಜ ಗಂಡನಿಂದ ಬೇರೆಯಾಗಿ ಬೇರೆ ವಾಸವಿದ್ದಳು. ಹಿರಿಯ ಮಗಳು ತಾಯಿ ಜೊತೆ ಇದ್ದರೆ, ಕಿರಿಯ ಮಗಳು ತಂದೆ ಜೊತೆ ಇದ್ದಳು.

ಜಯಪುರ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!