ಚಿಕ್ಕಮಗಳೂರು; ಮಲೆನಾಡು ಭಾಗದಲ್ಲಿ ಕಾಡಾನೆ ಮಾತ್ರವಲ್ಲದೇ ಇದೀಗ ಜನವಸತಿ ಪ್ರದೇಶದಲ್ಲಿ ಹುಲಿ ಕಾಣಿಸಿಕೊಳ್ಳುತ್ತಿದೆ. ಇಷ್ಟು ದಿನ ಕಾಡಾನೆ ಭಯದಿಂದ ಜನ ತತ್ತರಿಸಿ ಹೋಗಿದ್ದರು. ಚಿಕ್ಕಮಗಳೂರು ಜಿಲ್ಲೆಯ ಕಠಾರದಹಳ್ಳಿಯ ಜನನಿಬಿಡ ಪ್ರದೇಶದಲ್ಲಿ ಹುಲಿ ದಾಳಿಗೆ ಉದ್ದಯ್ಯ ಎಂಬುವರ ಮೂರು ಹಸುಗಳು ಸಾವನ್ನಪ್ಪಿದ್ದು, ಮುಳ್ಳಪ್ಪ ಎಂಬುವರ ಎರಡು ಹಸುಗಳು ಗಂಭೀರ ಗಾಯಗೊಂಡಿದೆ.

ಕಳೆದ ಆರು ತಿಂಗಳಿಂದ ಆಲ್ದೂರು ಸಮೀಪದ ಕಠಾರದಹಳ್ಳಿಯಲ್ಲಿ ಆಗಾಗ ಹುಲಿ ಕಾಣಿಸಿಕೊಳ್ಳುತ್ತಿತ್ತು. ಈಗ ನೇರ ಜನವಸತಿ ಪ್ರದೇಶಕ್ಕೆ ಬಂದು ಹಸುಗಳನ್ನು ಬಲಿ ಪಡೆದಿರುವುದಕ್ಕೆ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಇಷ್ಟು ದಿನ ಕಾಡಾನೆ ದಾಳಿಗೆ ನಡುಗಿ ಹೋಗಿದ್ರು ಇದೀಗ ಹುಲಿ ದಾಳಿಯಿಂದ ಇನ್ನಷ್ಟು ಭಯ ಭೀತಿಯಿಂದ ಬದುಕುವಂತಾಗಿದೆ.

