ಚಿಕ್ಕಮಗಳೂರು: ಪತ್ನಿಗೆ ಬೇರೆ ಯುವಕನೊಬ್ಬ ಮೆಸೇಜ್ ಮಾಡಿದ್ದಕ್ಕೆ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿದ್ದಾನೆ ಎಂಬ ಆರೋಪ ಚಿಕ್ಕಮಗಳೂರು ತಾಲೂಕಿನ ಬ್ಯಾಗದಹಳ್ಳಿಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದವನನ್ನು ಮನು (26) ಎಂದು ಗುರುತಿಸಲಾಗಿದೆ. ಫೆ.20ರ ರಾತ್ರಿ ಪತ್ನಿ ಹಾಗೂ ಮೆಸೇಜ್ ಮಾಡಿದ್ದವನ ಜೊತೆ ಮನು ಜಗಳವಾಡಿದ್ದ. ಗಲಾಟೆ ವೇಳೆ 112 ಪೊಲೀಸರು ಹೋಗಿ ಸಮಾಧಾನ ಮಾಡಿದ್ದರು. ಇಂದು (ಫೆ.21) ಮನು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪತ್ನಿ ಮೇಲಿನ ಅಕ್ರಮ ಸಂಬಂಧದ ಶಂಕೆಯಿಂದ ಮನು ಆತ್ಮಹತ್ಯೆಗೆ ಶರಣಾಗಿದ್ದಾನೆ.
Follow the Public impact Media channel on WhatsApp: https://whatsapp.com/channel/0029VaAUBknChq6Ibwwvi12W
PUBLIC IMPACT CHANNEL’ನ ಪ್ರತಿಯೊಂದು ಸುದ್ದಿಗಳು ಇಲ್ಲಿ ಸಿಗುತ್ತದೆ. ಮೇಲಿನ ಲಿಂಕ್ ಮೂಲಕ ಜಾಯಿನ್ ಆಗಿ.
ತನಿಖೆ ಮಾಡಿ ಮನು ಸಾವಿಗೆ ನ್ಯಾಯ ಕೊಡಿಸುವಂತೆ ಆತನ ಪೋಷಕರು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
