ಮೂಡಿಗೆರೆ : ಕಿತ್ತಲೆಗಂಡಿ ಗ್ರಾಮದ ಹೇಮಾವತಿ ನದಿಯ ಸೇತುವೆ ಶಿಥಿಲಗೊಂಡಿದ್ದು ಯಾವುದೇ ಕ್ಷಣದಲ್ಲಾದರೂ ಇದು ಬೀಳಬಹುದು ಹೀಗಾಗಿ ಶೀಘ್ರದಲ್ಲೇ ದುರಸ್ಥಿಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಈ ಹಳೆಯ ಸೇತುವೆ ಬೀಳುವ ಸ್ಥಿತಿಯಲ್ಲಿದ್ದು ಪಿಲ್ಲರ್ಗಳು ಹಳೆಯದಾಗಿದ್ದು, ದುರ್ಬಲವಾಗಿವೆ. ಯಾವುದೇ ಕ್ಷಣದಲ್ಲಾದರೂ ಬೀಳುವ ಅಪಾಯವಿದೆ.
ಈ ಸೇತುವೆಯೇ ದಾರದಹಳ್ಳಿ – ಬಿಳ್ಳೂರು – ಮೂಡಿಗೆರೆ ಸಂಚರಿಸುವ ಮುಖ್ಯ ಮಾರ್ಗವಾಗಿದೆ. ಸೇತುವೆ ಬಿದ್ದರೆ ಸಾವಿರಾರು ಜನರ ಸಂಚಾರ, ಶಾಲೆ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ಆಸ್ಪತ್ರೆಗೆ ಹೋಗುವರಿಗೆ ಸಂಪೂರ್ಣ ತೊಂದರೆಯಾಗುತ್ತದೆ
ಹಾಗಾಗಿ ಕ್ಷೇತ್ರದ ಶಾಸಕರು ಮತ್ತು ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಜನರ ಜೀವನದ ಜೊತೆ ಚೆಲ್ಲಾಟ ಆಡದೆ ಕೂಡಲೇ ಈ ಸೇತುವೆಯನ್ನು ದುರಸ್ತಿ ಮಾಡಿ ಹೊಸ ಸೇತುವೆ ನಿರ್ಮಿಸಿಕೊಡಬೇಕು
ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ವರದಿ:ಪುನೀತ್ ಕಡಿದಾಳು
9483811948
