ಮೂಡಿಗೆರೆ: ತಾಲೂಕಿನ ಜಕ್ಕಳಿ ಗ್ರಾಮದ ಕಾಫಿ ಬೆಳೆಗಾರರು ಹಾಗೂ ಎಪಿಎಂಸಿ ಮಾಜಿ ನಿರ್ದೇಶಕರಾದ ಜಿ.ಆರ್. ಜಗದೀಶ್ ಗೌಡ(65) ಅವರು ಅನಾರೋಗ್ಯದ ನಿಮಿತ್ತ ನಿಧನ ಹೊಂದಿದ್ದಾರೆ.
ಉತ್ತಮ ಕೃಷಿಕರಾಗಿದ್ದ ಅವರು ಕಾಫಿ ಮೆಣಸು ಅಡಿಕೆ ಬೆಳೆಗಾರರಾಗಿದ್ದರು. ಹಾಗೆ ಸಾರ್ವಜನಿಕ ಕ್ಷೇತ್ರದಲ್ಲಿಯೂ ತುಂಬಾ ಸಹಕಾರಿಯಾಗಿದ್ದವರು. ಸಹೃದಯಿ ಆಗಿದ್ದ ಜಗದೀಶ ಗೌಡ ಅವರು ಅಪಾ ಬಂದು ಮಿತ್ರರನ್ನು ಹೊಂದಿದ್ದರು.
ಇಂದು ಅವರ ನಿಧನಕ್ಕೆ ಕಾಫಿ ಬೆಳೆಗಾರರ ಒಕ್ಕೂಟ, ಕೆಂಪೇಗೌಡ ಒಕ್ಕಲಿಗರ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷದ ಮುಖಂಡರು ಸಹ ಸಂತಾಪ ಸೂಚಿಸಿದ್ದಾರೆ.
ಮೃತರಿಗೆ ಪತ್ನಿ, ಓರ್ವ ಮಗ , ಮಗಳು ಓರ್ವ ಸಹೋದರ, ಮೂವರು ಸಹೋದರಿರು ಹಾಗೆ ಅಪಾರ ಬಂದುವರ್ಗದವನ್ನು ಹೊಂದಿದ್ದರು.
