Sunday, July 26, 2026
Homeಜಿಲ್ಲಾಸುದ್ದಿಪೀಸ್ & ಅವೆರ್ನೆಸ್ ಟ್ರಸ್ಟ್ ವತಿಯಿಂದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ 92ನೇ ರಕ್ತದಾನ ಶಿಬಿರ.

ಪೀಸ್ & ಅವೆರ್ನೆಸ್ ಟ್ರಸ್ಟ್ ವತಿಯಿಂದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ 92ನೇ ರಕ್ತದಾನ ಶಿಬಿರ.

Telegram Group
Join Now

ಮೂಡಿಗೆರೆ: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಪೀಸ್ & ಅವೆರ್ನೆಸ್ ಟ್ರಸ್ಟಿನಿಂದ ಮೂಡಿಗೆರೆಯ ಜೆಸಿಐ ಭವನದಲ್ಲಿ ಏರ್ಪಡಿಸಿದ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.

ದೇಶದ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಕಾರ್ಗಿಲ್ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆಯೋಜಿಸಲಾದ ಈ ಶಿಬಿರದಲ್ಲಿ‌ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಗೆ ಕೈಜೋಡಿಸಿದರು.

ಶಿಬಿರದಲ್ಲಿ ಟ್ರಿನಿಟಿ ವಾಲಂಟಿಯರ್ ಬ್ಲಡ್ ಬ್ಯಾಂಕ್, ಚಿಕ್ಕಮಗಳೂರು ವೈದ್ಯಕೀಯ ಸಿಬ್ಬಂದಿ ರಕ್ತ ಸಂಗ್ರಹ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು. ರಕ್ತದಾನ ಮಾಡಿದ ಎಲ್ಲಾ ದಾನಿಗಳಿಗೆ ಪ್ರಮಾಣಪತ್ರ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪೀಸ್ & ಅವೆರ್ನೆಸ್ ಟ್ರಸ್ಟ್‌ನ ಸಂಸ್ಥಾಪಕ ಅಲ್ತಾಫ್ ಬಿಳಗುಳ, ಟ್ರಸ್ಟಿನ ಜಿಲ್ಲಾಧ್ಯಕ್ಷ ಪ್ರವೀಣ್, ಜೆಸಿಐ ಮೂಡಿಗೆರೆ ಅಧ್ಯಕ್ಷ ಸುನೀಲ್, ಟ್ರಿನಿಟಿ ರಕ್ತನಿಧಿಯ ವೈಧ್ಯಾಧಿಕಾರಿ , ವಿಶ್ವ ಮಾನ್ಯ ಪತ್ರಿಕೆಯ ಸಂಪಾದಕ ಪ್ರದೀಪ್ ಗೌಡ, ರಾಘವೇಂದ್ರ ಜನ್ನಾಪುರ, ಸಲ್ಮಾನ್, ಇಲ್ಯಾಸ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ರಕ್ತದಾನಿಗಳಿಗೆ, ವೈದ್ಯಕೀಯ ಸಿಬ್ಬಂದಿ, ಹಾಗೂ ಸಾರ್ವಜನಿಕರಿಗೆ ಪೀಸ್ & ಅವೆರ್ನೆಸ್ ಟ್ರಸ್ಟ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments