ಜಯಪುರ: ದೇಶದಲ್ಲಿ ನೀಟ್ ಪತ್ರಿಕೆ ಸೋರಿಕೆಯ ಕಾರಣದಿಂದ ಮನನೊಂದ 21 ಯುವಕರು ಆತ್ಮಹತ್ಯೆಗೆ ಶರಣಾಗಿದ್ದು, ವೈದ್ಯರಾಗುವ ಕನಸು ಹೊತ್ತ ಮುಗ್ಧ ಯುವಕರ ಸಾವಿಗೆ ಕೇಂದ್ರ ಸರ್ಕಾರ ನೇರ ಕಾರಣವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಹರೀಶ್ ಜಯಪುರ ಹೇಳಿದರು.
ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಜಯಪುರದಲ್ಲಿ ನಡೆದ ದೆಹಲಿ ಪ್ರತಿಭಟನಾ ನಿರತರ ಮೇಲಿನ ಹಲ್ಲೆಯನ್ನು ಖಂಡಿಸಿ ನಡೆಸಿದ ಪಂಜಿನ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಸಾವಿರಾರು ಕನಸುಗಳೊಂದಿಗೆ ಮಕ್ಕಳನ್ನು ಒಳ್ಳೆಯ ಶಿಕ್ಷಣ ನೀಡಿ, ಡಾಕ್ಟರ್ ಆಗಿಸಬೇಕೆಂದು ನೀಟ್ ಪರೀಕ್ಷೆಯಂತಹ ಕಠಿಣ ಪರೀಕ್ಷೆಗೆ ಮಕ್ತಳನ್ನು ಸಿದ್ ಮಾಡಿದ್ದರೆ ಕೇಂದ್ರ ಸರ್ಕಾರ ತನ್ನ ನಿರ್ಲಕ್ಷಯದಿಂದ ಪ್ರಶ್ನೆ ಪತ್ರಿಕೆ ಲೀಕ್ ಅಗುವಂತೆ ಮಾಡಿ, ಬಡ ಮತ್ತು ಮಧ್ಯಮ ವರ್ಗದ ಕನಸಿಗೆ ಎಳ್ಳು ನೀರು ಬಿಟ್ಟಿದೆ.
ಇಂತಹ ಅನ್ಯಾಯದ ವಿರುದ್ದ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದರೆ, ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ಪಡೆಯಬೇಕಿದ್ದ ಕೇಂದ್ರ ಸರ್ಕಾರ, ಅಧಿಕಾರದ ಆಸೆಗೆ ಬಿದ್ದು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮಾಡಿಸಿ ಓಡಿಸಲು ಪ್ರಯತ್ನಿಸುತ್ತಿದೆ. ಧರ್ಮದ ಅದಿಕಾರಕ್ಕೆ ಬಂದ ಕೇಂದ್ರ ಸರ್ಕಾರ, ತಮ್ಮ ಧರ್ಮವನ್ನು ಮರೆತಂತಿದೆ. ಪದೇ ಪದೇ ಮನಕಿ ಬಾತಿನಲ್ಲಿ ಮಾತನಾಡುವ ಪ್ರಧಾನಿ ನರೇಂದ್ರ ಮೋದಿಯವರು ಇಷ್ಟು ದೊಡ್ಡ ಹಗರಣ ನಡೆದಾಗಲೂ ಪತ್ರಿಕಾಗೋಷ್ಠಿಯನ್ನು ಕರೆದು ಸ್ಪಷ್ಟನೆಯನ್ನು ಕೊಟ್ಟಿಲ್ಲ ಇದು ದೇಶದ ದುರಂತ, ಹಾಗೂವ ಪ್ರಜಾಪ್ರಭುತ್ವಕೆ ಮಾರಕ. ಆಡಳಿತ ಪಕ್ಷವು ತಪ್ಪುಗಳನ್ನು ಮಾಡಿದರೆ ಪ್ರತಿಯೊಬ್ಬರೂ ಪ್ರಶ್ನೆ ಮಾಡುವ ಹಕ್ಕನ್ನು ನಮ್ಮ ಸಂವಿಧಾನ ನಮಗೆ ನೀಡಿದೆ. ಆದರೆ ಅಂತಹ ಪ್ತಿಭಟನಾ ಕಾರರನ್ನು ಹಿಂಸಿಸಿ ಓಡಿಸುವುದು ಹಿಟ್ಲರ್ ಸಂಸ್ಕೃತಿ ಕೂಡಲೇ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲೇಬೇಕು, ಬಂಧಿಸಿರುವ ವಿದ್ಯಾರ್ಥಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ನಂತರ ಮಲೆನಾಡು ರೈತ ಕಾರ್ಮಿಕ ಹಿತರಕ್ಷಣಾ ಸಮಿತಿಯ ಅದ್ಯಕ್ಷ ಅತ್ತಿಕುಳಿ ಸುಂದರೇಶ್ ಮಾತನಾಡಿ, ಮೋದಿ ನೇತ್ರತ್ವದ ಸರಕಾರ ದೆಹಲಿಯಲ್ಲಿನ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ನಡೆಸಿರುವ ಹಲ್ಲೆ ಖಂಡನೀಯ ವಾಗಿದ್ದು, ಪೋಲಿಸರ ಸೋಗಿನಲ್ಲಿ ಬಿಜೆಪಿಯ ಬೆಂಬಲಿತ ಸಂಘಟನೆಗಳ ಕಾರ್ಯಕರ್ತರನ್ನು ಬಿಟ್ಟು ಪ್ರತಿಭಟನಾ ನಿರತರ ಮೇಲೆ ಹಲ್ಲೆ ನಡೆಸಲಾಗಿದೆ. ಕಪ್ಪು ಹಣ ತರುತ್ತೇವೆ, ದೇಶದ ಸಾಲ ತೀರಿಸುತ್ತೇವೆ, ಪೆಟ್ರೋಲ್ ಡೀಸೆಲ್, ಗ್ಯಾಸ್ ದರ ಕಡಿಮೆ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಇಂದು ಎಲ್ಲವನ್ನು ಜಾಸ್ತಿಮಾಡಿ, ಜನಸಾಮಾನ್ಯರು ಬದುಕದಂತೆ ಮಾಡಿದೆ ಎಂದರು.
ಜನಶಕ್ತಿಯ ಮುಖಂಡ ಕೌಳಿ ರಾಮು ಮಾತನಾಡಿ, ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಹಿರಂಗವಾದ ಪರಿಣಾಮ ದೇಶದ ಲಕ್ಷಾಂತರ ಯುವಕರ ಕನಸು ಭಗ್ನವಾಗಿದ್ದು, ಇಂತಹ ದೊಡ್ಡ ಪ್ರಮಾದವೆಸಗಿದ್ದರೂ ಕನಿಷ್ಠ ಶಿಕ್ಷಣ ಸಚಿವರ ರಾಜಿನಾಮೆ ಪಡೆಯುವ ಕೆಲಸ ಪ್ರದಾನಿ ಮೋದಿ ಮಾಡಲಿಲ್ಲ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ, ಪರಸ್ಪರ ದ್ವೇಶ ಹರಡುವವರಿಗೆ ಬಡವರ, ಹಿಂದುಳಿದ ವರ್ಗದವರ ಸಂಕಷ್ಟ ಕಣ್ಣಿಗೆ ಕಾಣಿಸುತ್ತಿಲ್ಲ ಎಂಬುದಕ್ಕೆ ಇದು ಸ್ಪಷ್ಟ ಉಧಾಹರಣೆ. ಪೊಲೀಸರು ಹಾಗೂ ಸರ್ಕಾರ ತಮ್ಮ ಗೂಂಡಾಗಳ ಮೂಲಕ ವಿದ್ಯಾರ್ಥಿಗಳ ಮೇಲೆ ನಡೆಸಿರುವ ಹಲ್ಲೆ ಅಮಾನುಷ ಹಾಗೂ ಖಂಡನೀಯ ಎಂದರು.
ಕಾರ್ಯಕ್ರಮದಲ್ಲಿ ಕುಕ್ಕುಡಿಗೆ ರವಿಂದ್ರ, ಸುಭಾಷ್, ಸೋಮಶೇಖರ್ ತೆಂಗಿನ ಮನೆ, ಇಸ್ಮಾಯಿಲ್, ಅನಿಲ್ ಡಿಮೆಲ್ಲೋ, ಪ್ರವೀಣ್ ಜಲ್ಮಾರ, ಸಂದೀಪ್ ಜಲದುರ್ಗ ಹಾಗೂ ಇತರರು ಭಾಗವಹಿಸಿದ್ದರು.
25ಜೆವೈಪಿ1: ಪ್ರಗತಿಪರ ಸಂಘಟನೆಗಳ ನೇತ್ತತ್ವದಲ್ಲಿ ಶುಕ್ರವಾರ ಜಯಪುರದಲ್ಲಿ ದೆಹಲಿ ಪ್ರತಿಭಟನಾ ನಿರತರ ಮೇಲಿನ ಹಲ್ಲೆಯನ್ನು ಖಂಡಿಸಿ ಪಂಜಿನ ಮೆರವಣಿಗೆ ನಡೆಸಲಾಯಿತು. ಮುಖಂಡರಾದ ಕೌಳಿ ರಾಮು, ಹರೀಷ್, ಕುಕ್ಕುಡಿ ರವಿಂದ್ರ, ಇಸ್ಮಾಯಿಲ್, ಅನಿಲ್ ಇತರರಿದ್ದರು.
