Tuesday, September 8, 2026
Homeಜಿಲ್ಲಾಸುದ್ದಿPramod Muthalik: ಮುಂದಿನ ದಿನಗಳಲ್ಲಿ ಹಿಂದೂಗಳಾಗಿ ಬದುಕಲು ಭವಿಷ್ಯದಲ್ಲಿ ಸಾಧ್ಯವೆ: ಪ್ರಮೋದ್ ಮುತಾಲಿಕ್

Pramod Muthalik: ಮುಂದಿನ ದಿನಗಳಲ್ಲಿ ಹಿಂದೂಗಳಾಗಿ ಬದುಕಲು ಭವಿಷ್ಯದಲ್ಲಿ ಸಾಧ್ಯವೆ: ಪ್ರಮೋದ್ ಮುತಾಲಿಕ್

Telegram Group
Join Now

ಮೂಡಿಗೆರೆ: ನಿಮ್ಮ ಮಗ ಮೊಮ್ಮಗ ಮುಂದಿನ ದಿನಗಳಲ್ಲಿ ಹಿಂದೂ ಆಗಿ ಮುಂದುವರೆಯಲು ಸಾಧ್ಯವಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆ. ಹಿಂದೂ ಸಿದ್ದಾಂತ ಬೆಂಬಲಿಸಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದರು.

ಅವರು ಲ್ಯಾಪ್ಸ್ ಸಭಾಂಗಣದಲ್ಲಿ ಗುರುವಂದನೆ ಮತ್ತು ಜಿಲ್ಲಾ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ. ಕಳೆದ 60 ವರ್ಷದಲ್ಲಿ ಹಿಂದೂ ವಿರೋದಿ, ಭಯೋತ್ಪಾದನೆ, ಲವ್ ಜಿಹಾದ್, ಜನಸಂಖ್ಯಾ ಸ್ಪೋಟ, ಭ್ರಷ್ಟಚಾರ. ದೇಶ ಲೂಟಿ, ಅನಾಚಾರ ಜೊತೆಗೆ ಹಿಂದೂ ಭಯೋತ್ಪಾದನೆ ಎಂಬ ಸೃಷ್ಠಿ ತಯಾರಿ ಕೂಡ ನಡೆದು ಹಿಂದುತ್ವವನ್ನೆ ಕೊಲ್ಲಿವವರೆಗೆ ವ್ಯವಸ್ಥೆ ಬಂದಿತ್ತು. ಅದರೆ 2014 ನಂತರ ದೇಶದಲ್ಲಿ ಮೋದಿ ನೇತೃತ್ವದಲ್ಲಿ ಬದಲಾವಣೆ ಗಾಳಿ ಬೀಸಿದ್ದು ಶ್ರೀರಾಮ ಮಂದಿರ. ಕಾಶಿ ಕಾರಿಡಾರ್. ಆಂತರಿಕ ಸುರಕ್ಣತೆ ಕಾಶ್ಮೀರದ 370ನೆ ವಿಧಿ ರದ್ದು. ದೇಶದ ಆತ್ಮ ನಿರ್ಭರತೆ ಮೂಲಕ ದೇಶ ವಿಶ್ವಗುರು ಎಂಬಲ್ಲಿಗೆ ಬಂದು ಹಿಂದ್ವುತ್ವಕ್ಕೆ ಗೌರವ ದೊರೆಯಲು ಸಾಧ್ಯವಾದರು 1990ರಲ್ಲಿ ಕಾಶ್ಮೀರದಲ್ಲಿ ಹಿಂದೂಗಳನ್ನು ಅತ್ಯಾಚಾರ ಕೊಲೆ ಸುಲಿಗೆ ಮೂಲಕ ಓಡಿಸಿದರು ಎಂದರು.

ಸ್ಯೆನಿಕರ ಮೇಲೆ ಅಲ್ಲಿನ ಸಣ್ಣ ಹೆಣ್ಷು ಮಕ್ಕಳು, ಬಾಲಕರು ಕಲ್ಲೆಸೆಯತ್ತಿದ್ದರು. ಅಂದು ಹಿಂದೂಗಳು ಮಲಗಿದ ಕಾರಣ ಇಂದು ದೇಶದೆಲ್ಲೆಡೆ 5 ಸಾವಿರಕ್ಕು ಹೆಚ್ವು ಕಾಶ್ಮೀರದಂತ ಉದ್ರೀಕ್ತ ಸ್ಥಳಗಳು. ಜಮ್ಮುವಿನಿಂದ ಕನ್ಯಾಕುಮಾರಿವರೆಗೆ ನಡೆಯುತ್ತಿದೆ. ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ತರಲು ಆಗ್ರಹಿಸಬೇಕಾಗಿದ್ದು ಇದೆಲ್ಲಾ ಅಗಬೇಕಾದರೆ ವ್ಯಕ್ತಿ ಕೇಂದ್ರೀತ ವ್ಯವಸ್ಥೆ ಆಗಬಾರದು ಎಂದು ಭಗವಧ್ವಜವನ್ನ ಪೂಜಿಸುತ್ತಿದ್ದು. ಹಿಂದೂ ಸಂಘಟನೆಗಳಲ್ಲಿ ಒಡಕು ಬೇಡ ಎಲ್ಲರು ಇಂದಿನ ಪರಿಸ್ಥಿತಿಯಲ್ಲಿ ಒಂದಠಗಲೆ ಬೇಕು ಎಂದ ಇವರು ಮಲೆನಾಡಿನಲ್ಲಿ ಕಾಪಿ ತೋಟಗಳ್ಲಿ ಬಾಂಗ್ಲಾ ವಲಸಿಗರು ತುಂಬಿದ್ದು ಸ್ಥಳಿಯರ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ. ಬೆಳೆಗಾರರು ಎದ್ದೇಳಿ ಎಲ್ಲದಕ್ಕೂ ಸಿದ್ದವಾಗಿ ಏನಾದರು ಆಗಲಿ ಪ್ರಮೋದ್ ಮತಾಲಿಕ್ ಮತ್ತು ಶ್ರೀರಾಮ ಸೇನೆ ನಿಮ್ಮ ಜೊತೆ  ಸದಾ ಇರುತ್ಇತದೆ ಎಂದು ಘೋಷಿಸಿದರು.

ಶ್ರೀರಾಮಸೇನೆ ಪ್ರಾಂತ್ಯ ಸಂಚಾಲಕ ಸುಂದರೇಶ್ ನರ್ಗಲ್ ಮಾತನಾಡಿ, ರಾಜಕೀಯವೆ ಬೇರೆ ಹಿಂದುತ್ವವೆ ಬೇರೆ ಹಿಂದುತ್ವವನ್ನು ಮರೆತ ಕಾರಣವೆ ಇಂದು ಜಿಲ್ಲೆಯಲ್ಲಿ ಐದು ಸ್ಥಾನ ಕಳೆದುಕೊಂಡು ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಮನೆಯಿಂದ ಹಿಂದೂ ಎಂದು ಹೊರ ಹೋಗಲು ಗೃಹಮಂತ್ರಿ ಆದೇಶ ಬೇಕು ಮನೆ ಒಳಗೆ ಬರಲು ಪೋಲಿಸರ ಪರ್ಮಿಶೆನ್ ಬೇಕು ಹಿಂದೂಗಳ ಮೇಲೆ ದೌರ್ಜನ್ಯ ಮಿತಿ ಮೀರಿದೆ ಹಾಗೆ ಬಾಂಗ್ಲಾದಿಂದ ಬಂದವರಿಗೆ ರಕ್ಷಣೆ ನೀಡಿ ಸ್ಥಳೀಯ ಹಿಂದೂಗಳ ಮೇಲೆ ಕೇಸು ದಾಖಲಿಸಿದ ಪೋಲಿಸರ ಮೇಲೆ ಅಸಮಧಾನ ವ್ಯಕ್ತಪಡಿಸಿದರು.

ಇದೆ ವೇಳೆ ಜಿಲ್ಲಾದ್ಯಕ್ಷ ಸುಧೀರ್ ಕಡಿದಾಳು, ವಿಭಾಗಿಯ ಸಂಚಾಲಕ ಸುನೀಲ್ ಕೂವೆ, ಜಿಲ್ಲಾ ಪದಾಧಿಕಾರಿಗಳಾಗಿ ಕಾರ್ತಿಕ್ ಪಟ್ಟದೂರು, ಪ್ರೀತಮ್ ಮಳಲೂರು, ಲಿಕಿತ್, ಪ್ರೃತ್ವಿರಾಜ್. ಕೃಷ್ಣದೇವ್ ಭಟ್, ಕೌಶಿಕ್, ಶ್ವಾಮ್ ಅರುಣ್ ಕುಂಬರಡಿ, ಸಂದೇಶ್ ಗುತ್ತಿ, ಪ್ರಶಾಂತ್ ಶೆಟ್ಟಿ, ತಿಲಕ್ ಸತಿಗನಹಳ್ಳಿ, ಜೀವನ್ ಕಡಿದಾಳು, ಅರುಣ್ ಕೊಟ್ರಕೆರೆ, ಸಂದೇಶ್ ಹೊರಟ್ಟಿ, ಹರ್ಷ ಮಡ್ಡಿಕೆರೆ, ಸಾಗರ್ ಮೂಡಿಗೆರೆ, ಪುನಿತ್ ಕಡಿದಾಳ್ ಇವರು ಜಿಲ್ಲೆಯ ವಿವಿಧ ನೂತನ ಪದಾಧಿಕಾರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!