Tuesday, September 8, 2026
Homeಜಿಲ್ಲಾಸುದ್ದಿSakaleshpura: ಅಕ್ರಮವಾಗಿ ಸಾಗಿಸುತ್ತಿದ್ದ 19 ಗೋವುಗಳ ರಕ್ಷಣೆ: ಸಮಗ್ರ ತನಿಖೆಗೆ ಶಾಸಕ ಸಿಮೆಂಟ್ ಮಂಜು ಆಗ್ರಹ!

Sakaleshpura: ಅಕ್ರಮವಾಗಿ ಸಾಗಿಸುತ್ತಿದ್ದ 19 ಗೋವುಗಳ ರಕ್ಷಣೆ: ಸಮಗ್ರ ತನಿಖೆಗೆ ಶಾಸಕ ಸಿಮೆಂಟ್ ಮಂಜು ಆಗ್ರಹ!

Telegram Group
Join Now

ಸಕಲೇಶಪುರ: ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದು ಈ ವೇಳೆ ಮಾರನಹಳ್ಳಿ ಚೆಕ್‌ಪೋಸ್ಟ್ ಬಳಿ ಈಚರ್ ವಾಹನ ತಡೆದು ವಾಹನದಲ್ಲಿದ್ದ 19 ಗೋವುಗಳ ರಕ್ಷಣೆ ಮಾಡಲಾಗಿದ್ದು ರಕ್ಷಿಸಿದ ಗೋವುಗಳನ್ನು ಸಕಲೇಶಪುರ ಎಪಿಎಂಸಿ ಪ್ರಾಂಗಣದಲ್ಲಿ ಇರಿಸಲಾಗಿದೆ

ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದು  ಆಂಧ್ರಪ್ರದೇಶ ಕಡೆಯಿಂದ ಬಂದಿದ್ದ ಎನ್ನಲಾದ KA-13-AA-6873 ಈಚರ್ ವಾಹನಗೋವುಗಳನ್ನು ಇಕ್ಕಟ್ಟಾಗಿ, ಕ್ರೂರ ರೀತಿಯಲ್ಲಿ ಸಾಗಾಣೆ ಹಾಗೂ ಕೆಲವು ಗೋವುಗಳ ಕಣ್ಣಿಗೆ ಮೆಣಸಿನಕಾಯಿ ಹಾಕಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿದ್ದು ಗೋವುಗಳ ಸ್ಥಿತಿ ಪರಿಶೀಲನೆ ನಡೆಸಿದ್ದಾರೆ. ಗೋವುಗಳ ಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿದ ಶಾಸಕ ಸಿಮೆಂಟ್ ಮಂಜು ಅಕ್ರಮ ಜಾನುವಾರು ಸಾಗಾಟ ಪ್ರಕರಣದ ಸಮಗ್ರ ತನಿಖೆಗೆ ಶಾಸಕ ಸಿಮೆಂಟ್ ಮಂಜು ಸೂಚನೆ ನೀಡಿದ್ದಾರೆ.

ಸಾಗಾಟದ ಹಿಂದಿರುವವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೆ ಯಾರೇ ಪ್ರಭಾವಿಗಳಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ. ಗೋವುಗಳನ್ನು ಎಲ್ಲಿಂದ, ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬುದರ ತನಿಖೆಗೆ ಆಗ್ರಹಿಸಿದ್ದಾರೆ.

ಈಚರ್ ವಾಹನ ಪಾಸ್ ಮಾಡಿಸಲು ಫಾರ್ಚುನರ್‌ನಲ್ಲಿ ಕೆಲವರು ಬಂದಿದ್ದರೆಂಬ ಅನುಮಾನಮಾರನಹಳ್ಳಿ ಚೆಕ್‌ಪೋಸ್ಟ್ ಸಿಸಿಟಿವಿ ದೃಶ್ಯ ಪರಿಶೀಲನೆಗೆ ಹಿಂದೂ ಹಿತ ರಕ್ಷಣಾ ವೇದಿಕೆ ಮುಖಂಡ ರಘು ಸಕಲೇಶಪುರ ಆಗ್ರಹಫಾರ್ಚುನರ್ ವಾಹನ ಹಾಗೂ ಅದರಲ್ಲಿದ್ದವರ ಪತ್ತೆಗೆ ಒತ್ತಾಯ.ಅಕ್ರಮ ಜಾನುವಾರು ಸಾಗಾಟದ ಹಿಂದೆ ಸಂಘಟಿತ ಜಾಲವಿದೆಯೇ? ಸಮಗ್ರ ತನಿಖೆಗೆ ಆಗ್ರಹಕ್ಕೆ ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!