Sunday, July 26, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು ಜಿಲ್ಲೆಯಲ್ಲಿ ಕೈಕೊಟ್ಟ ಮುಂಗಾರು: ರೈತರಿಂದ ಕೆರೆ & ಬೋರ್ವೇಲ್ ನೀರು ಹರಿಸಿ ಭತ್ತದ...

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೈಕೊಟ್ಟ ಮುಂಗಾರು: ರೈತರಿಂದ ಕೆರೆ & ಬೋರ್ವೇಲ್ ನೀರು ಹರಿಸಿ ಭತ್ತದ ನಾಟಿ

Telegram Group
Join Now

ಚಿಕ್ಕಮಗಳೂರು: ಗ್ರಾಮೀಣ ಭಾಗಗಳಲ್ಲಿ ಭತ್ತದ ಬೆಳೆ ಬೆಳೆಯುವ ರೈತ ಮುಂಗಾರು ಆರಂಭವಾಗುತ್ತಿದ್ದಂತೆಯೆ ಭತ್ತದ ಬೀಜವನ್ನು ಕೃಷಿ ಗದ್ದೆಗೆ ಬಿತ್ತಿ ಕೆಲವೆ ದಿನಗಳಲ್ಲಿ ನಾಟಿ ಮಾಡಿ ಭತ್ತದ ಕೃಷಿ ಮಾಡುತ್ತಾನೆ. ಹಾಗೆ ಖಾಂಡ್ಯ ಹೋಬಳಿ ಬಾಳೆಹೊನ್ನೂರು ಸಮೀಪ ಬಿದರೆ ಗ್ರಾಮದಲ್ಲಿ ಭತ್ತದ ಬಿತ್ತನೆ ಮತ್ತು ಸಸಿ ಬಿತ್ತನೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಹೌದು ಈ ಬಾರಿ ವಾಡಿಕೆಯಂತೆ ಮಳೆ ಆಗದಿದ್ದರೂ ಕೂಡ ಮಲೆನಾಡಿನ ಜನ ಹೆಚ್ಚಾಗಿ ಈ ಭಾಗದಲ್ಲಿ ಭತ್ತ ಬೆಳೆಯುದರಿಂದ ಭತ್ತ ಬಿತ್ತನೆಗೆ ಮಳೆ ಅವಶ್ಯಕತೆ ಹೆಚ್ಚಾಗಿ ಬೇಕು ಮಳೆ ಆದರೆ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಬಿದ್ದ ಕಾರಣ ಬೋರ್ವೇಲ್ ಹಾಗೆ ಕೆರೆ ನೀರನ್ನು ಹಾಯಿಸಿಕೊಂಡು ಬಿತ್ತನೆ ಮಾಡಲಾಗಿದೆ.

ಹಾಗೆ ಮಳೆ ಬಾರದೆ ಇದ್ದರೆ ಕೆರೆ ಮತ್ತು ಬೋರ್ವೇಲ್ ನೀರು ಕಮ್ಮಿ ಆದರೆ ಮುಂದಿನ ದಿನಗಳಲ್ಲಿ ಬೆಳೆಗೆ ನೀರನ್ನು ಹೇಗೆ ಹಾಯಿಸುವುದು ಎಂಬದು ರೈತರಲ್ಲಿ ಆತಂಕದಲ್ಲಿ ಹೆಚ್ಚಾಗಿದೆ..

ವರದಿ :ದೇವೇಂದ್ರ ಗೌಡ ಬಿದರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments