Wednesday, September 9, 2026
Homeಕ್ರೈಮ್ಬೆಂಗಳೂರಲ್ಲಿ ರೀಲ್ಸ್‌ ನೋಡುತ್ತಿದ್ದ ವಿಚಾರಕ್ಕೆ ಪತ್ನಿ ಕೊಂದು ಪತಿ ನೇಣಿಗೆ ಶರಣು!

ಬೆಂಗಳೂರಲ್ಲಿ ರೀಲ್ಸ್‌ ನೋಡುತ್ತಿದ್ದ ವಿಚಾರಕ್ಕೆ ಪತ್ನಿ ಕೊಂದು ಪತಿ ನೇಣಿಗೆ ಶರಣು!

Telegram Group
Join Now

ಬೆಂಗಳೂರು: ರೀಲ್ಸ್‌ ನೋಡುತ್ತಿದ್ದ ವಿಚಾರಕ್ಕೆ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಹೆಚ್‌ಎಎಲ್‌ ವಿಭೂತಿಪುರದಲ್ಲಿ ನಡೆದಿದೆ.ರಾಘವೇಂದ್ರ ಎಂಬಾತ ತನ್ನ ಪತ್ನಿ ಶೃತಿ ಅವರನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ರಾಘವೇಂದ್ರ ಹಾಗೂ ಶೃತಿ ಪ್ರೀತಿಸಿ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳನ್ನು ದಾವಣಗೆರೆಯಲ್ಲಿರುವ ಅಜ್ಜಿ ಮನೆಯಲ್ಲಿ ಇರಿಸಲಾಗಿತ್ತು. ನಿನ್ನೆ ದಂಪತಿ ಇಬ್ಬರೇ ಮನೆಯಲ್ಲಿ ಇದ್ದ ವೇಳೆ ಗಲಾಟೆ ನಡೆದಿದೆ.ಈ ಗಲಾಟೆ ವಿಕೋಪಕ್ಕೆ ತಿರುಗಿ ರಾಘವೇಂದ್ರ ಬಿಯರ್ ಬಾಟಲ್‌ನಿಂದ ಪತ್ನಿಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಸ್ಥಳಕ್ಕೆ ಹೆಚ್‌ಎಎಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!