ಶಿವಮೊಗ್ಗ: ಎರಡು ಬೈಕ್ ನಡುವೆ ಭೀಕರ ಅಪಘಾತ ಅಂಭವಿಸಿದ್ದು ಶಿವಮೊಗ್ಗದ ಹಿರಿಯ ಪತ್ರಕರ್ತ ಅನಿಲ್ ಕುಮಾರ್ ಸಾವನ್ನಪ್ಪಿದ್ದಾರೆ.
ವಿನೋಬ ನಗರದ ರಸ್ತೆಯಲ್ಲೇ ನಿಲ್ಲಿಸಿದ್ದ ಸ್ಕೂಟಿಯಿಂದಾಗಿ ಈ ಅಪಘಾತ ನಡೆದಿರೋದು ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿದೆ. ಸ್ಕೂಟಿಯಿದ್ದ ಹಿನ್ನೆಲೆಯಲ್ಲಿ ಇಬ್ಬರು ಬೈಕ್ ಸವಾರರು ಮುಖಾಮುಖಿಯಾಗಿ ಡಿಕ್ಕಿ ಹೊಡೆದುಕೊಂಡಿದ್ದಾರೆ. ಮತ್ತೊಬ್ಬ ಬೈಕ್ ಸವಾರ ಸಣ್ಣಪುಟ್ಟ ಗಾಯಗಳಿಂದ ಬಚಾವಾಗಿದ್ರೆ, ಅನಿಲ್ ಗೆ ಮಾತ್ರ ಆ ಅದೃಷ್ಟ ಇರಲಿಲ್ಲ.
ಸದ್ಯ ಬಿಟಿವಿ ವರದಿಗಾರನಾಗಿ ಕೆಲಸ ಮಾಡ್ತಿದ್ದ ಅನಿಲ್ ಕುಮಾರ್, ಈ ಹಿಂದೆ ಚಿಕ್ಕಮಗಳೂರಿನಲ್ಲಿ ಟಿವಿ9 ಕ್ಯಾಮರಮಾನ್ ಆಗಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ್ರು.
ಅಪಘಾತದ ಬಳಿಕ ಸ್ಥಳದಲ್ಲೇ ಹೆಚ್ಚು ರಕ್ತಸ್ರಾವ ಆಗಿದ್ದು, ಆಸ್ಪತ್ರೆಗೆ ಕರೆದೊಯ್ಯಲು ವಿಳಂಬವಾದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅನಿಲ್ ಸಾವನ್ನಪ್ಪಿದ್ದಾರೆ. ಪತ್ನಿ ಸೇರಿದಂತೆ ಮಕ್ಕಳನ್ನ ಅನಿಲ್ ಅಗಲಿದ್ದಾರೆ.
