Thursday, July 30, 2026
Homeಜಿಲ್ಲಾಸುದ್ದಿಸಿದ್ದಾರ್ಥ ಹೆಗಡೆ ಎಂದರೆ ಬರಿ ವ್ಯಕ್ತಿಯಲ್ಲ, ಸಮಾಜದ ದೊಡ್ಡ ಶಕ್ತಿ: ಮಾಜಿ ಸಚಿವ ಬಿ. ಬಿ....

ಸಿದ್ದಾರ್ಥ ಹೆಗಡೆ ಎಂದರೆ ಬರಿ ವ್ಯಕ್ತಿಯಲ್ಲ, ಸಮಾಜದ ದೊಡ್ಡ ಶಕ್ತಿ: ಮಾಜಿ ಸಚಿವ ಬಿ. ಬಿ. ನಿಂಗಯ್ಯ

Telegram Group
Join Now

ಮೂಡಿಗೆರೆ : ಕಾರ್ಮಿಕರ ಬಗ್ಗೆ ಉದ್ದಾತ್ತ ಭಾವನೆಯನ್ನು ಹೊಂದಿದವರು ಲಕ್ಷಾಂತರ ಕಾಫಿ ಬೆಳೆಗಾರರಿಗೆ ಆಶಾದಾಯಕವಾಗಿದ್ದರು ಮತ್ತು ಸ್ಫೂರ್ತಿಯಾದಂತ ಏಕೈಕ ವ್ಯಕ್ತಿಯಾಗಿದ್ದರು ವಿ.ಜಿ.ಸಿದ್ದಾರ್ಥ ಹೆಗ್ಗಡೆಯವರು ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ತಿಳಿಸಿದರು.

ಪಟ್ಟಣದ ಸಿದ್ದಾರ್ಥ ವನದಲ್ಲಿ ಸಿದ್ದಾರ್ಥ ಹೆಗ್ಗಡೆಯವರ ಏಳನೇ ವರ್ಷದ ಪುಣ್ಯತಿಥಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಶೃಂದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದಾರ್ಥ ಹೆಗ್ಗಡೆ ಎಂದರೆ ಬರಿ ವ್ಯಕ್ತಿಯಾಗದೆ ಸಮಾಜದ ದೊಡ್ಡ ಶಕ್ತಿಯಾಗಿದ್ದರು ಇಂದು ಆ ಶಕ್ತಿ ನಮ್ಮೊಂದಿಗಿಲ್ಲ ಆದರೆ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರು.

ಸಿದ್ದಾರ್ಥ ಹೆಗ್ಗಡೆ ಅಭಿಮಾನಿ ಬಳಗದ ಅಧ್ಯಕ್ಷರು ಮಾಜಿ ಗೃಹಮಂಡಲಿ ಅಧ್ಯಕ್ಷ ಜಿ.ಹೆಚ್.ಹಾಲಪ್ಪಗೌಡ ಮಾತನಾಡಿ. ಕಾರ್ಮಿಕರೋರ್ವರಿಗೆ ಎದೆ ನೋವು ಬಂದು ಒದ್ದಾಡುತ್ತಿದ್ದಾಗ ಹಿಂದೆ ಮುಂದೆ ಯೋಚಿಸದೆ ಹೆಲಿಕ್ಯಾಪ್ಟರ್ ಮೂಲಕ ಆ ಕಾರ್ಮಿಕನನ್ನು ಆಸ್ಪತ್ರೆಗೆ ಸೇರಿಸಿ ಆತನ ಶಸ್ತ್ರ ಚಿಕಿತ್ಸೆ ಮಾಡಿಸಿ ಆತನ ಜೀವ ಉಳಿಸುವುದರೊಂದಿಗೆ ಅವರ ಕುಟುಂಬಕ್ಕೆ ಆಸರೆಯಾಗಿದ್ದಾರೆ. ತಂದೆ ಗಂಗಯ್ಯ ಹೆಗ್ಡೆ ಸ್ವಾತಂತ್ರ ಹೋರಾಟಗಾರರಾದರೆ ಮಗ ಸಾಮಾಜಿಕ ಹೋರಾಟಗಾರ ಜನ ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆತು ತನ್ನ ಕೈಲಾದ ಸೇವೆ ತೊಡಗಿಕೊಂಡ ಅನ್ನದಾತ ಎಂದರೆ ತಪ್ಪಾಗಲಾರದು ಎಂದರು..

ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಮಾತನಾಡಿ. ಬೆಳೆಗಾರರ ಸಂಘವನ್ನು ಸಿದ್ದಾರ್ಥ ಅವರ ತಂದೆ ಗಂಗಯ್ಯ ಹೆಗ್ಗಡೆ ಸ್ಪಾಪಿಸಿದರೆ ಬೆಳೆಗಾರ ಸಂಕಷ್ಟಕ್ಕೆ ನೆರವಾಗುತ್ತಿದ್ದವರು. ಗಂಗಯ್ಯ ಹೆಗ್ಡೆ ಮತ್ತು ಸಿದ್ದಾರ್ಥ ಹೆಗ್ಡೆ ಇವರಿಬ್ಬರು ಕಾರ್ಮಿಕರಿಗೂ ಹಾಗೂ ಬೆಳೆಗಾರರಿಗೂ ಎರಡು ಕಣ್ಣುಗಳ ಹಾಗೆ ಇದ್ದವರು. ಎಂದರು

ಸಿದ್ದಾರ್ಥ ಅಭಿಮಾನಿ ಬಳಗದ ಅಧ್ಯಕ್ಷ ಜಿ.ಹೆಚ್.ಹಾಲಪ್ಪಗೌಡರು ಅವರ ಪುತ್ಥಳಿಯನ್ಮ್ನ ಸ್ಥಾಪಿಸುವುದರೊಂದಿಗೆ ಅವರ ನೆನಪು ಸದಾ ಮನದಲ್ಲಿ ಉಳಿಯುವಂತೆ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿ.ಕೆ.ಲಕ್ಷ್ಮಣ ಕುಮಾರ್, ಹವಳ್ಳಿ ಕೃಷ್ಣೇಗೌಡ್ರು, ಮೊಯಿದ್ದಿನ್ ಶೇಟ್, ಪೂರ್ಣೆಶ್ ಮೂರ್ತಿ, ಹೂವಪ್ಪ, ಮಾಜಿ ಗ್ರಾಪಂ ಸದಸ್ಯರುಗಳಾದ ಪ್ರಶಾಂತ್, ಶಿವಣ್ಣ, ದಿವಾಕರ್, ರಾಧ, ವಿಶ್ವನಾಥ್, ಉದಯ್, ರಾಮಚಂದ್ರ ಒಡೆಯರ್, ದಶರಥ್ ಹಾಲಪ್ಪಗೌಡ ಸೇರಿದಂತೆ ಸಿದ್ದಾರ್ಥ ಅಭಿಮಾನಿಗಳು ಸೇರಿದ್ದರು.

ಮಳೆಯನ್ನು ಲೆಕ್ಕಿಸದೆ ಪುತ್ತಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕ್ಯಾಂಡಲ್ ಹಚ್ಚಿ ಶೃದ್ದಾಂಜಲಿ ಅರ್ಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments