Tuesday, March 17, 2026
Homeಕ್ರೈಮ್ಚಿಕ್ಕಮಗಳೂರು: ಸಾಕಷ್ಟು ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್: ಇಡೀ ದಿನ ರಸ್ತೆ ಮಧ್ಯೆ ಬೋರ್ಡ್...

ಚಿಕ್ಕಮಗಳೂರು: ಸಾಕಷ್ಟು ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್: ಇಡೀ ದಿನ ರಸ್ತೆ ಮಧ್ಯೆ ಬೋರ್ಡ್ ಹಿಡಿದು ನಿಲ್ಲುವ ಶಿಕ್ಷೆ!

ಚಿಕ್ಕಮಗಳೂರು: ಹೆಲ್ಮೆಟ್ ಧರಿಸದೇ, ಒನ್ ವೇ ರೈಡಿಂಗ್ ಹಾಗೂ ಡ್ರಿಂಕ್ & ಡ್ರೈವ್ ಮಾಡಿದ ಆರೋಪಿಗೆ ಚಿಕ್ಕಮಗಳೂರು ನ್ಯಾಯಾಲಯ ಬೋರ್ಡ್ ಹಿಡಿದು ಇಡೀ ದಿನ ರಸ್ತೆ ಮಧ್ಯೆ ನಿಲ್ಲುವ ಕಮ್ಯೂನಿಟಿ ಶಿಕ್ಷೆ ನೀಡಿದೆ.

ಕಡೂರು ಪಟ್ಟಣದ ಬಿಸಿಲೇಹಳ್ಳಿ ಗ್ರಾಮದ ರಂಜಿತ್‌ ಎಂಬವನು ಸಾಕಷ್ಟು ಸಲ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದ. ಪೊಲೀಸರು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಕರೆದೊಯ್ದಿದ್ದರು. ಈ ವೇಳೆ ನ್ಯಾಯಾಲಯದಲ್ಲಿ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಕ್ಕೆ ಕೋರ್ಟ್ ಈ ರೀತಿಯ ಕಮ್ಯುನಿಟಿ ಸೇವೆಯ ವಿಭಿನ್ನ ಶಿಕ್ಷೆ ನೀಡಿದೆ.

ಇಂದು (ಮಾ.17) ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಕಡೂರು ಪಟ್ಣಣದ ಮಲ್ಲೇಶ್ವರ ಸರ್ಕಲ್‌ನಲ್ಲಿ ರಸ್ತೆ ಮಧ್ಯೆ ಬೋರ್ಡ್ ಹಿಡಿದು ನಿಲ್ಲುವಂತೆ ಆದೇಶಿಸಿದೆ. ಕೋರ್ಟ್ ಆದೇಶದಂತೆ ಕೈಯಲ್ಲಿ ಬೋರ್ಡ್ ಹಿಡಿದು ನಿಂತ ತಪ್ಪಿತಸ್ಥನನ್ನು ನಿಲ್ಲುತ್ತಾನೋ? ಇಲ್ವೋ? ಎಂದು ಗಮನಿಸಲು ಓರ್ವ ಪೊಲೀಸ್‌ ಸಿಬ್ಬಂದಿಯನ್ನು ನೇಮಿಸುವಂತೆ ನ್ಯಾಯಾಲಯ ಸೂಚಿಸಿತ್ತು. ಈ ದಿನದ ಶಿಕ್ಷೆ ಪೂರ್ಣಗೊಂಡ ನಂತರ ಪೊಲೀಸರು ಕೋರ್ಟ್‌ಗೆ ವರದಿ ಸಲ್ಲಿಸುವಂತೆ ಕೋರ್ಟ್ ಆದೇಶದಲ್ಲಿ ತಿಳಿಸಿತ್ತು.

ಈ ರೀತಿಯ ವಿಭಿನ್ನ ಶಿಕ್ಷೆಯ ಮೂಲಕ ನ್ಯಾಯಾಲಯ ಟ್ರಾಫಿಕ್ ನಿಯಮಗಳ ಪಾಲನೆ ಮಾಡುವಂತೆ ಎಚ್ಚರಿಕೆಯ ಸಂದೇಶ ನೀಡಿದೆ.‌ ಸಾರ್ವಜನಿಕರು ಕೂಡ ಈ ಶಿಕ್ಷೆಯನ್ನು ಸ್ವಾಗತಿಸಿ ಮೆಚ್ಚಿದ್ದಾರೆ. 500 – 1000 ಸಾವಿರ ರೂ. ದಂಡ ಹಾಕುವ ಬದಲು ಇಡೀ ದಿನ ಈ ರೀತಿ ನಿಲ್ಲಿಸಿದರೆ, ಟ್ರಾಫಿಕ್ ರೂಲ್ಸ್ ಬಗ್ಗೆ ಭಯ ಬರುವುದರ ಜೊತೆ ತಪ್ಪು ಮಾಡದಂತೆ ಎಲ್ಲರೂ ಎಚ್ಚರಿಕೆ ವಹಿಸುತ್ತಾರೆ ಎಂಬುದು ಸಾರ್ವಜನಿಕ ವಲಯದ ಅಭಿಪ್ರಾಯವಾಗಿದೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!