Saturday, August 8, 2026
Homeಕ್ರೈಮ್ಪೈಪ್ ಲೈನ್ ದುರಸ್ತಿಗೆ ಹಳೇ ಮೂಡಿಗೆರೆ ಪಂಚಾಯಿತಿ ಅಧಿಕಾರಿಗಳ ಮೀನಾಮೇಷ, ಸಾರ್ವಜನಿಕರಿಂದ ಕಿಡಿ!

ಪೈಪ್ ಲೈನ್ ದುರಸ್ತಿಗೆ ಹಳೇ ಮೂಡಿಗೆರೆ ಪಂಚಾಯಿತಿ ಅಧಿಕಾರಿಗಳ ಮೀನಾಮೇಷ, ಸಾರ್ವಜನಿಕರಿಂದ ಕಿಡಿ!

Telegram Group
Join Now

ಮೂಡಿಗೆರೆ : ಪಟ್ಟಣದ ಸಮೀಪವಿರುವ ಹಳೇ ಮೂಡಿಗೆರೆ ಗ್ರಾಮ ಪಂಚಾಯತಿಯಲ್ಲಿ ಹೇಳುವವರು-ಕೇಳುವವರೂ ಇಲ್ಲದಂತಾಗಿದೆ. ಅಧಿಕಾರಿಗಳು ಆಡಿದ್ದೆ ಆಟ ಎಂಬಂತಾಗಿದೆ. ಕಳೆದ ಎರಡು ತಿಂಗಳಿನಿಂದ ಮುಖ್ಯ ರಸ್ತೆಯ ಸಮೀಪ ನೀರು ಪೋಲಾಗುತ್ತಿದ್ದರು ತಮಗೂ ಅದಕ್ಕೂ ಸಂಬಂದವೇ ಇಲ್ಲಾ ಎಂಬ ರೀತಿಯಲ್ಲಿ ಇರುವುದು ಬಹಳ ದುರದೃಷ್ಟಕರ ಸಂಗತಿಯಾಗಿದೆ ಎಂದು ಹ್ಯಾಂಡ್ ಪೋಷ್ಟ್ ನ ಅಂಗಡಿ ಮಾಲೀಕರು ಆರೋಪಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಪತ್ರಕರ್ತರು ಗ್ರಾಮ ಪಂಚಾಯತಿಯ ಅಭಿವೃದ್ದಿ ಅಧಿಕಾರಿ ಮೀನಾ ಪಿ.ಗೌಡರನ್ನು ವಿಚಾರಿಸಿದಾಗ ಹೇಮಾವತಿಯಿಂದ ಪಟ್ಟಣಕ್ಕೆ ಸರಬರಾಜಾಗುವ ನೀರಿನ ಪೈಪ್ ಎಂದು ಹೇಳಿದ್ದು ಅದರ ಬಗ್ಗೆ ಮತ್ತಷ್ಟು ಕೆದಕಿದಾಗ ತಮ್ಮ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಜನರಿಗೆ ಕುಡಿಯುವ ನೀರಿನ ಪೈಪ್ ಎಂದು ಒಪ್ಪಿಕೊಂಡು ತಿಂಗಳಲ್ಲಿ ಹಲವು ಬಾರಿ ಪೈಪ್ ಒಡೆದು ಹೋಗುತ್ತಿದ್ದು. ತಿಂಗಳಿಗೆ 4 ರಿಂದ 5 ಸಾವಿರ ಖರ್ಚಾಗುತ್ತಿದೆ ಎಂಬುತ್ತರ ಬಂದಿತು.

ಪೈಪ್ ಲೈನ್ ಮೇಲೆ ಇರುವುದರಿಂದ ಈ ತೊಂದರೆ ಆಗುತ್ತಿದೆ. ತಿಂಗಳಿಗೆ 4 ರಿಂದ – 5 ಸಾವಿರ ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿರುವ ಅಧಿಕಾರಿಗಳು ಇನ್ನಷ್ಟು ಆಳ ತೆಗೆದು ಪೈಪ್ ಹುಗಿಯುವ ಕೆಲಸವನ್ನೇಕೆ ಮಾಡುವುದಿಲ್ಲಾ ಎಂದು ಸಾರ್ವಜನಿಕರ ವಾದವಾಗಿದೆ.

ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು, ಕುಡಿಯುವ ನೀರಿಗೆ ಹಲವಡೆ ಹಾಹಾಕಾರ ಉಂಟಾಗಿದೆ. ರಸ್ತೆ ಬದಿಯಲ್ಲಿ ಒಡೆದಿರುವ ನೀರಿನ ಒತ್ತಡ ಜಾಸ್ತಿ ಆದರೆ ಕಾರಂಜಿಯಂತೆ ಚಿಮ್ಮುತ್ತದೆ. ಇನ್ನು ಇಲ್ಲಿನ ಆಡಳಿತಾಧಿಕಾರಿ ಗಮನಕ್ಕೆ ತಂದರೆ ಸರಿ ಮಾಡಿಸುತ್ತೇನೆ ಎಂಬ ಉತ್ತರ ಬರುತ್ತದೆ ಹೊರತು ಇಲ್ಲಿಯವರೆಗೂ ದುರಸ್ತಿಗೆ ಮುಂದಾಗದೆ ಹಳೇಮೂಡಿಗೆರೆ ಗ್ರಾಮ ಪಂಚಾಯತಿಯ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು ಇವರ ಅಂದಾ ದರ್ಭಾರ್ಗೆ ಮುಕ್ತಿ ಯಾವಾಗ ಎಂದು ಸಾರ್ವಜನಿಕರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments