Saturday, August 8, 2026
Homeಜಿಲ್ಲಾಸುದ್ದಿಮೂಡಿಗೆರೆ ತಾಲೂಕಿನಲ್ಲಿ 70ಕ್ಕೂ ಹೆಚ್ಚು ಕಾಡಾನೆಗಳ ದರ್ಬಾರ್: ಶಾಸಕಿಯವರೇ ಈಗಲಾದ್ರೂ ಜನರ ಕಷ್ಟಕ್ಕೆ ಸ್ಪಂದಿಸುತ್ತೀರಾ?

ಮೂಡಿಗೆರೆ ತಾಲೂಕಿನಲ್ಲಿ 70ಕ್ಕೂ ಹೆಚ್ಚು ಕಾಡಾನೆಗಳ ದರ್ಬಾರ್: ಶಾಸಕಿಯವರೇ ಈಗಲಾದ್ರೂ ಜನರ ಕಷ್ಟಕ್ಕೆ ಸ್ಪಂದಿಸುತ್ತೀರಾ?

Telegram Group
Join Now

ಮೂಡಿಗೆರೆ :ಮಲೆನಾಡಲ್ಲಿ ಮುಂದುವರಿದ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ 70ಕ್ಕೂ ಹೆಚ್ಚು ಕಾಡಾನೆಗಳ ದರ್ಬಾರ್ ಜೋರಾಗಿದೆ.

ಹೌದು … ಮೂಡಿಗೆರೆ ತಾಲೂಕಿನ ಕಸ್ಕೆಬೈಲು, ಜಿ.ಹೊಸಳ್ಳಿ ಸೇರಿ ಹಲವು ಗ್ರಾಮಗಳ ಸುತ್ತಮುತ್ತಾ ಬೀಟಮ್ಮ, ಭೀಮ ಹೆಸರಿನ ಗುಂಪಿನ ಕಾಡಾನೆಗಳು ಲಗ್ಗೆ ಇಟ್ಟಿದ್ದು ಸ್ಥಳೀಯರಲ್ಲಿ ನಿದ್ದೆಗೆಡಿಸಿದೆ ಅಂದ್ರೆ ತಪ್ಪಾಗಲಾರದು.

ಕಾಫಿ ತೋಟ, ಭತ್ತದ ಗದ್ದೆಗಳಲ್ಲಿ ದಾಂದಲೆ ಮಾಡ್ತಿರುವ ಕಾಡಾನೆಗಳು ರೈತರು ಕೃಷಿ ಮಾಡೋಕೆ ಭಯ ಪಡೋ ವಾತಾವರಣ ನಿರ್ಮಾಣ ವಾಗಿದೆ ಹಾಗೆ ವಿದ್ಯಾರ್ಥಿಗಳು ಪರೀಕ್ಷೆಗೆ ಹೋಗಲು ಭಯದ ವಾತಾವರಣ ಸೃಷ್ಟಿಯಾಗಿದೆ.

ಒಂದೇ ತಾಲೂಕಿನಲ್ಲಿ ಈ ರಿತಿ ಹಲವು ಗುಂಪುಗಳ ಕಾಡಾನೆ ಸಂಚಾರ ಮಾಡಿದ್ದು ಕಾರ್ಮಿಕರಿಗೆ ಕೆಲಸ ಇಲ್ಲದೇ ಜೀವನ ನಿರ್ವಹಣೆ ಸಂಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಈಗಾಗಲೇ ಮಲೆನಾಡಲ್ಲಿ ಕಾಡಾನೆ ದಾಳಿಯಿಂದ ಸಾವು-ನೋವು ಸಂಭವಿಸಿವೆ ಅರಣ್ಯ ಇಲಾಖೆ, ಎಲಿಫೆಂಟ್ ಟಾಸ್ಕ್ ಫೋರ್ಸ್ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರು ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಮಲೆನಾಡಿಗರು ಒತ್ತಾಯ ಹೇರಿದ್ದಾರೆ.

ಸ್ಥಳೀಯ ಶಾಸಕಿ ನಯನಾ ಮೋಟಮ್ಮ ಈ ಬಗ್ಗೆ ಈವರೆಗೂ ಎಲ್ಲೂ ಅರಣ್ಯ ಸಚಿವರ ಜೊತೆ ಮಾತನಾಡಿದ್ದೂ ಕಂಡೇ ಇಲ್ಲ ಈಗಲಾದರೂ ಎಚ್ಚೆತ್ತುಕೊಂಡು ಅಲ್ಲಿನ ಸ್ಥಳೀಯ ನಿವಾಸಿಗಳ ಕಷ್ಟಕ್ಕೆ ಹೆಗಲಾಗುತ್ತಾರೋ ಅಥವಾ ಆನೆ ತುಳಿತದಿಂದ ಒಂದು ಸಾವಾದ ಮೇಲೆ ಸ್ಥಳಕ್ಕೆ ಆಗಮಿಸುತ್ತಾರೋ ಕಾದುನೋಡಬೇಕಿದೆ.

ವರದಿ: ಶಾಲಿನಿ ಪಿ.ಗೌಡ, ಮೂಡಿಗೆರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments