Friday, March 20, 2026
Homeರಾಜಕೀಯಸರ್ಕಾರದ ಹಿಂದೂ ವಿರೋಧಿ ಮತ್ತು ದೇಶದ್ರೋಹಿ 'ಮನಸ್ಥಿತಿ' ಎತ್ತಿ ತೋರುತ್ತಿದೆ-ಡಾ.ಸಿ.ಟಿ ರವಿ

ಸರ್ಕಾರದ ಹಿಂದೂ ವಿರೋಧಿ ಮತ್ತು ದೇಶದ್ರೋಹಿ ‘ಮನಸ್ಥಿತಿ’ ಎತ್ತಿ ತೋರುತ್ತಿದೆ-ಡಾ.ಸಿ.ಟಿ ರವಿ

ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಹಾಗೂ ಬಜರಂಗದಳ ಮುಖಂಡ ಶ್ಯಾಮ್ ವಿ ಗೌಡ ಮೇಲೆ ಗಡಿಪಾರು ನೋಟಿಸಿಗೆ ಶಿಫಾರಸ್ಸು ಮಾಡಿರೋ ಕ್ರಮ ಸರ್ಕಾರದ ಹಿಂದೂ ವಿರೋಧಿ ಮತ್ತು ದೇಶದ್ರೋಹಿ ಮನಸ್ಥಿತಿಯನ್ನ ಎದ್ದು ತೋರಿಸುತ್ತಿದೆ ಎಂದು ಪರಿಷತ್ ಸದಸ್ಯ ಸಿ.ಟಿ ರವಿ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿ.ಟಿ ರವಿ ಅವರು, ಈ ಕೂಡಲೇ ಕಾಂಗ್ರೆಸ್ ಸರ್ಕಾರ ತನ್ನ ಸೇಡಿನ ರಾಜಕಾರಣವನ್ನ ನಿಲ್ಲಿಸಬೇಕು, ನಮ್ಮ ಕಾರ್ಯಕರ್ತರ ಪರವಾಗಿ ನಾವು ಬಂಡೆಯಂತೆ ನಿಲ್ಲುತ್ತೇವೆ ಎಂದಿದ್ದಾರೆ.

ಚಿಕ್ಕಮಗಳೂರಿನ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಸಂತೋಷ್ ಕೋಟ್ಯಾನ್ ಹಾಗೂ ಭಜರಂಗದಳದ ಮುಖಂಡರಾದ ಶ್ಯಾಮ್ ವಿ. ಗೌಡ ಅವರನ್ನು ಗಡಿಪಾರು ಮಾಡಲು ಹೊರಟಿರುವ ಪೋಲಿಸ್ ಇಲಾಖೆಯ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇನೆ. ಇದು ಅಟ್ಟಹಾಸದ ಪರಮಾವಧಿ. ದೇಶ ಮತ್ತು ಧರ್ಮದ ಉಳಿವಿಗಾಗಿ ಹಗಲಿರುಳು ಶ್ರಮಿಸುವವರನ್ನು ಅಪರಾಧಿಗಳಂತೆ ಬಿಂಬಿಸಿ ಜಿಲ್ಲೆಯಿಂದ ಹೊರಹಾಕಲು ಹೊರಟಿರುವುದು Indian National Congress – Karnataka ಸರ್ಕಾರದ “ಹಿಂದೂ ವಿರೋಧಿ” ಮತ್ತು “ದೇಶದ್ರೋಹಿ” ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ.

ಇದೇ ಕಾಂಗ್ರೆಸ್ ಸರ್ಕಾರದಲ್ಲಿ ವಿಧಾನಸೌಧದ ಒಳಗೆ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿದ ದೇಶದ್ರೋಹಿಗಳಿಗೆ ರಕ್ಷಣೆ ಸಿಗುತ್ತದೆ, ಬಾಂಬ್ ಹಾಕುವವರನ್ನು ‘ಬ್ರದರ್ಸ್’ ಎಂದು ಕರೆಯಲಾಗುತ್ತದೆ. ಆದರೆ, ದೇಶಕ್ಕಾಗಿ ಧ್ವನಿ ಎತ್ತುವವರ ಮೇಲೆ ಗಡಿಪಾರಿನ ಅಸ್ತ್ರ ಪ್ರಯೋಗಿಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಗಲಭೆ ಮಾಡಿದವರ ಕೇಸ್‌ಗಳನ್ನು ಹಿಂಪಡೆಯುವ ನೀವು, ಸಮಾಜಕ್ಕೆ ಆಸರೆಯಾಗಿ ನಿಲ್ಲುವ ಕಾರ್ಯಕರ್ತರನ್ನು ಗುರಿಯಾಗಿಸುತ್ತಿರುವುದು ಯಾವ ನ್ಯಾಯ?

ಈ ಕೂಡಲೇ ಕಾಂಗ್ರೆಸ್ ಸರ್ಕಾರ ತನ್ನ ಸೇಡಿನ ರಾಜಕಾರಣವನ್ನು ನಿಲ್ಲಿಸಿ, ಗಡಿಪಾರಿನ ಶಿಫಾರಸ್ಸನ್ನು ಹಿಂಪಡೆಯಬೇಕು. ದೇಶ ಮತ್ತು ಧರ್ಮದ ಪರವಾಗಿ ನಿಲ್ಲುವ ನಮ್ಮ ಕಾರ್ಯಕರ್ತರ ಪರವಾಗಿ ನಾವೆಲ್ಲರೂ ಬಂಡೆಯಂತೆ ನಿಲ್ಲುತ್ತೇವೆ. ನಿಮ್ಮ ದಮನಕಾರಿ ತಂತ್ರಗಳಿಗೆ ನಾವು ಬೆದರುವುದಿಲ್ಲ. ನಮ್ಮ ಸಂಘಟಿತ ಹೋರಾಟದ ಎದುರು ನಿಮ್ಮ ಈ ಅನ್ಯಾಯದ ನಿರ್ಧಾರಗಳು ಧೂಳೀಪಟವಾಗುವುದು ಖಚಿತ’ ಎಂದು ಪರಿಷತ್ ಸದಸ್ಯ ಸಿ. ಟಿ ರವಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!