Wednesday, March 25, 2026
Homeಕ್ರೈಮ್ಜಯಪುರ: ಮೇಗುಂದ ಹೋಬಳಿಯಲ್ಲಿ ಭಾರೀ ಗಾಳಿ, ಮಳೆ: ಮರ ಬಿದ್ದು ಹಲವು ಕಡೆ ವಿದ್ಯುತ್ ಕಂಬಗಳು...

ಜಯಪುರ: ಮೇಗುಂದ ಹೋಬಳಿಯಲ್ಲಿ ಭಾರೀ ಗಾಳಿ, ಮಳೆ: ಮರ ಬಿದ್ದು ಹಲವು ಕಡೆ ವಿದ್ಯುತ್ ಕಂಬಗಳು ತುಂಡು!

ಜಯಪುರ: ಮೇಗುಂದ ಹೋಬಳಿಯಲ್ಲಿ ಸೋಮವಾರ ಸುರಿದ ಭಾರೀ ಮಳೆಗೆ ಹಲವೆಡೆ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಸುಮಾರು ನಲವತ್ತಕ್ಕೂ ಹೆಚ್ಚು ಕಂಬಗಳು ತುಂಡಾಗಿವೆ. ಆದ್ದರಿಂದ ನಿನ್ನೆ ಸಂಜೆಯಿಂದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

ಗುಡ್ಡೆತೋಟ, ಕಚಿಗೆ, ಬಿಟಿಎಫ್, ಕೊಟೊರ್ಡಿ ಭಾಗದಲ್ಲಿ ಮರಗಳು ತಂತಿಯ ಮೇಲೆ ಬಿದ್ದು ಬಹಳ ಕಂಬಗಳು ತುಂಡಾಗಿವೆ.

ಇಂದು ಬೆಳಗ್ಗೆಯಿಂದ ಕಂಬಗಳು ನಿಲ್ಲಿಸುವ ಕಾರ್ಯ ಪ್ರಾರಂಭಿಸಿದ್ದು ಸಂಜೆ ಎಲ್ಲಾ ಭಾಗಗಳಿಗೂ ಕರೆಂಟ್ ಬರುವ ಸಾಧ್ಯತೆಯಿದೆ ಎಂದು ಜಯಪುರದ ಸಹಾಯಕ ಇಂಜಿನಿಯರ್ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

ಸೋಮವಾರ ಸುರಿದ ಮಳೆಗೆ ಸುಮಾರು 40ಕ್ಕೂ ಹೆಚ್ಚು ಕಂಬಗಳು ತುಂಡಾಗಿದ್ದು, ಕಂಬಗಳನ್ನು ನಿಲ್ಲಿಸುವ ಕಾರ್ಯ ಇಂದು ಬೆಳಗ್ಗೆಯಿಂದ ಪ್ರಾರಂಭಿಸಿದ್ದೇವೆ. ಕಂಬಗಳು ಹಾಗೂ ಸಿಬ್ಬಂದಿಗಳ ಕೊರತೆ ಇಲ್ಲದ ಕಾರಣ ಇಂದು ಸಂಜೆಯೊಳಗೆ ಎಲ್ಲಾ ಭಾಗಗಳಿಗೂ ಕರೆಂಟ್ ಬರಲಿದೆ.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!