Friday, August 14, 2026
Homeಕ್ರೈಮ್Datta Peeta controversy: ಕಾಫಿನಾಡಲ್ಲಿ ಮತ್ತೆ ಮುನ್ನೆಲೆಗೆ ಬಂದ ದತ್ತಪೀಠ ವಿವಾದ: ರಾಜ್ಯ ಸರ್ಕಾರದ ವಿರುದ್ಧ...

Datta Peeta controversy: ಕಾಫಿನಾಡಲ್ಲಿ ಮತ್ತೆ ಮುನ್ನೆಲೆಗೆ ಬಂದ ದತ್ತಪೀಠ ವಿವಾದ: ರಾಜ್ಯ ಸರ್ಕಾರದ ವಿರುದ್ಧ ಮುಸ್ಲಿಮರ ಆಕ್ರೋಶ

Telegram Group
Join Now

ಚಿಕ್ಕಮಗಳೂರು : ಕಾಫಿನಾಡಲ್ಲಿ ಮತ್ತೆ ಮುನ್ನೆಲೆಗೆ ಬಂದ ದತ್ತಪೀಠ ವಿವಾದ ಚಿಕ್ಕಮಗಳೂರು ತಾಲೂಕಿನ ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಹಿನ್ನೆಲೆಯಲ್ಲಿ ದತ್ತಪೀಠದ ಪೂಜಾ-ವಿಧಿವಿಧಾನದ ಬಗ್ಗೆ ಸರ್ಕಾರದ ವಿರುದ್ಧ ಮತ್ತೆ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು .. ಜಿಲ್ಲಾಡಳಿತ ಜಿಯಾರತ್ ಹಾಗೂ ಫಾತೇಹಾ ಅವಕಾಶ ನೀಡದಿದ್ದಕ್ಕೆ ಮುಸ್ಲಿಮರು ಅಸಮಾಧಾನ ವ್ಯಕ್ತಪಡಿಸಿದ್ದು ದರ್ಗಾ ಹಾಗೂ ಖಬರಸ್ಥಾನ್ ನಲ್ಲಿ ಜಿಯಾರತ್ ಸಲ್ಲಿಸಲು ಅವಕಾಶ ನೀಡದ ಜಿಲ್ಲಾಡಳಿತ ಹೀಗಾಗಿ ಮುಂಚಿತವಾಗಿ ಮಾಹಿತಿ ನೀಡಿದ್ದರೂ ಜಿಲ್ಲಾ ಅವಕಾಶ ನೀಡಲಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಜಿಯಾರತ್ ಅಂದರೆ ಸಮಾಧಿಗಳ ಪ್ರಾರ್ಥನೆ ಮಾಡುವುದು ಹಾಗೆ ಫಾತೇಹಾ ಅಂದ್ರೆ ಸಮಾಧಿ ಬಳಿ ಸಿಹಿ ಇಟ್ಟು ಪೂಜೆ ಮಾಡುವುದು ಎಂದರ್ಥ. ಈ ಎರಡೂ ಹೊಸ ಆಚರಣೆ ಎಂದು ಅನುಮತಿ ನಿರಾಕರಿಸಿದ್ದ ಜಿಲ್ಲಾಡಳಿತ ಈ ಹಿಂದೆ ತೆರೆದಿದ್ದ ಖಬರಸ್ಥಾನ್ ಗೇಟ್ ಈ ಬಾರಿ ಸಂಪೂರ್ಣ ಮುಚ್ಚಿದ್ದರು ದೂರದಿಂದ ಖಬರಸ್ಥಾನ್ ನೋಡಿ, ಜಿಯಾರತ್ ಮಾಡಲು ಅವಕಾಸದ ನೀಡಲಿಲ್ಲ ಎಂದು ಆಕ್ರೋಶ

ದತ್ತಪೀಠದಲ್ಲಿ ಜಿಲ್ಲಾಡಳಿತದ ವಿರುದ್ಧ 3 ಗಂಟೆಗಳ ಕಾಲ ಮುಸ್ಲಿಮರ ಪ್ರತಿಭಟನೆ ನಡೆಸಿದ್ದು ಮುಂದಿನ ದಿನಗಳಲ್ಲಿ ಯಾವುದೇ ಅಡಚಣೆ ಇಲ್ಲದೆ ಜಿಯಾರತ್ ಗೆ ಅವಕಾಶ ನೀಡಲು ಆಗ್ರಹ ಪಡಿಸಿದ್ದಾರೆ.

ಈ ಬಗ್ಗೆ ರಾಮಲಿಂಗಾರೆಡ್ಡಿ, ಸಿಎಂ ಸಿದ್ದರಾಮಯ್ಯ, ಜಮೀರ್ ಅಹಮದ್ ಸೇರಿ ಚಿಕ್ಕಮಗಳೂರು ಎಸ್ಪಿ-ಡಿಸಿಗೆ ದೂರು ನೀಡಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments