ಹಿಂದುಳಿದ ಒಕ್ಕಲಿಗರ ಅಭಿವೃದ್ಧಿ ಸಂಘದ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಕುರಿತು ಬುಧವಾರ ಚಿಕ್ಕಮಗಳೂರು ಪಟ್ಟಣದ ಪ್ರೆಸ್ ಕ್ಲಬ್ ನಲ್ಲಿ ಪ್ರಕಟಿಸಲಾಯಿತು
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಒಕ್ಕಲಿಗ ರಾಜ್ಯ ಸಮಿತಿ ಅಧ್ಯಕ್ಷ ಸೋಮಶೇಖರ್ ಅವರು ಜಿಲ್ಲೆಯ ಹಿಂದುಳಿದ ಒಕ್ಕಲಿಗರ ಅಭಿವೃದ್ಧಿ ಉದ್ದೇಶ ಇಟ್ಟುಕೊಂಡು ಕರ್ನಾಟಕ ರಾಜ್ಯದ ಹಿಂದುಳಿದ ಒಕ್ಕಲಿಗರ ಅಭಿವೃದ್ಧಿ ಸಂಘದ ರಾಜ್ಯ ಸಮಿತಿ ವತಿಯಿಂದ ಮಹಿಳಾ ಮತ್ತು ಪುರುಷರ ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆ ಹಿಂದುಳಿದ ಒಕ್ಕಲಿಗರ ಅಭಿವೃದ್ಧಿ ಉದ್ದೇಶ ಇಟ್ಟುಕೊಂಡು ಮಾರ್ಚ್ 25 ರಂದು ರಾಜ್ಯ ಸಮಿತಿಯ ಅಧ್ಯಕ್ಷ ಮತ್ತು ಸ್ಥಾಪಕರಾದ ಎಚ್.ಪಿ.ಸೋಮಶೇಖರ್ ಅವರ ಕಾರ್ಯಕಾರಿ ಮಂಡಳಿ ಸಮ್ಮುಖದಲ್ಲಿ ರಾಜ್ಯ ಸಮಿತಿ ಕಾರ್ಯಾದ್ಯಕ್ಷರಾದ ಜಿ.ಐ.ರೇಣುಕಾ ಕುಮಾರ್, ಸಂಚಾಲಕರಾದ ದಿನೇಶ್ ಎ.ಕೆ. ರವರನ್ನು ರಾಜ್ಯ ಸಮಿತಿಗೆ ನೇಮಿಸಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಎಂ.ಪಿ.ದೀಪಕ್, ಮಹಿಳಾ ಜಿಲ್ಲಾ ಅಧ್ಯಕ್ಷರಾಗಿ ಎಂ.ಆರ್ ಚೈತ್ರಾ, ಪುರುಷರ ಉಪಾಧ್ಯಕ್ಷರಾಗಿ ಧರ್ಮೇಗೌಡ, ಆಲ್ದೂರು ಮತ್ತು ತರೀಕೆರೆ ಹನುಮಂತೇಗೌಡ, ಮಹಿಳಾ ಉಪಾಧ್ಯಕ್ಷರಾಗಿ ಅಮಿತಾ ಎಚ್.ಎ. ಮೂಡಿಗೆರೆ ಮತ್ತು ಲತಾ ತರೀಕೆರೆರವರನ್ನು, ಪುರುಷರ ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಸಿ.ಮಂಜುನಾಥ ಆಯ್ಕೆ ಮಾಡಲಾಗಿದೆ.
ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಚಿತ್ರಾ ಎಂ.ಆರ್., ಪುರುಷರ ಜಿಲ್ಲಾ ಕಾರ್ಯದರ್ಶಿಯಾಗಿ ಚಂದ್ರಶೇಖರ ಎಂ.ಸಿ., ಜಿಲ್ಲಾ ಮಹಿಳಾ ಕಾರ್ಯದರ್ಶಿಯಾಗಿ ಚೈತ್ರಾ ಎಸ್.ಕೆ. ಕೊಪ್ಪ. ಕೋಶಾಧಿಕಾರಿಯಾಗಿ ಶ್ವೇತಾ ಎಂ.ಕೆ. ಕಳಸ ಅವರ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಹಿಂದುಳಿದ ಒಕ್ಕಲಿಗರ ಅಭಿವೃದ್ಧಿ ಸಂಘವನ್ನು 2006-07 ರಲ್ಲಿ ಬಡಒಕ್ಕಲಿಗರ ಅಭಿವೃದ್ಧಿ ಮತ್ತು ರಕ್ಷಣೆಗಾಗಿ ಸ್ಥಾಪಿಸಿದ್ದು, ರಾಜ್ಯ ಮತ ಕೇಂದ್ರ ಸರ್ಕಾರದ ಸವಲತ್ತನ್ನು ನಮ್ಮ ಜಿಲ್ಲಾ ಸಮಿತಿ ವತಿಯಿಂದ ಒದಗಿಸುವ ಉದ್ದೇಶಕ್ಕಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನೂತನ ಪದಾಧಿಕಾರಿಗಳಾದ ಶ್ವೇತಾ, ಮಮತಾ, ಅಮಿತ ಗೌಡ ಮೂಡಿಗೆರೆ , ದಿನೇಶ್, ದೀಪಕ್ ಉಪಸ್ಥಿತರಿದ್ದರು.
ವರದಿ:ಪುನೀತ್ ಕಡಿದಾಳು
9483811948
