Saturday, September 26, 2026
Homeಕ್ರೈಮ್ಮೂಡಿಗೆರೆ: ಕಾಫಿನಾಡಿನಲ್ಲಿ ಬೀಡು ಬಿಟ್ಟ 15ಕ್ಕೂ ಹೆಚ್ಚು ಕಾಡಾನೆಗಳ ಗುಂಪು: ಬೆಚ್ಚಿ ಬಿದ್ದ ಸ್ಥಳೀಯರು!

ಮೂಡಿಗೆರೆ: ಕಾಫಿನಾಡಿನಲ್ಲಿ ಬೀಡು ಬಿಟ್ಟ 15ಕ್ಕೂ ಹೆಚ್ಚು ಕಾಡಾನೆಗಳ ಗುಂಪು: ಬೆಚ್ಚಿ ಬಿದ್ದ ಸ್ಥಳೀಯರು!

Telegram Group
Join Now

ಮೂಡಿಗೆರೆ: ಕಾಫಿನಾಡಿನಲ್ಲಿ ಕಾಡಾನೆಗಳ ಆರ್ಭಟ ಮುಂದುವರೆದಿದ್ದು ಜನರು ಆತಂಕದಲ್ಲೇ ಕಳೆಯುವಂತಾಗಿದೆ.

ಹೌದು .. ಮೂಡಿಗೆರೆ ತಾಲೂಕಿನ ಗೋಣಿಬೀಡು ವ್ಯಾಪ್ತಿಯಲ್ಲಿ 45ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿವೆ. ಬೇಲೂರು ಮಾರ್ಗವಾಗಿ ಬಂದಿರುವ 15ಕ್ಕೂ ಹೆಚ್ಚು ಕಾಡಾನೆಗಳು ಕಸ್ಕೆಬೈಲು, ಚಟ್ಟನಹಳ್ಳಿ, ಹುಲಿಹಂಡ್ಲು ಸೇರಿದಂತೆ ಹಲವೆಡೆ ಸಂಚಾರ ನಡೆಸುತ್ತಿದ್ದವು.

ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿರುವ ವಿಡಿಯೋ ಸಾರ್ವಜನಿಕರ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಕಾಡಾನೆಗಳ ಹಿಂಡನ್ನು ಅಲ್ಲಿನ ಸ್ಥಳೀಯರು ಕಣ್ತುಂಬಿಕೊಂಡರು.

ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ಕಾಡಾನೆಗಳನ್ನು ಕಾಡಿನತ್ತ ಹಿಮ್ಮೆಟ್ಟಿಸಬೇಕು ಹಾಗೂ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಸರ್ಕಾರವನ್ನು ಆಗ್ರಹಿಸಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!