Thursday, March 26, 2026
Homeಜಿಲ್ಲಾಸುದ್ದಿಕೊಪ್ಪ: ನಿಜವಾದ ಸಾಧಕರಿಗೆ ಸಿಗಬೇಕಾದ ಮನ್ನಣೆ ರಾಜಕೀಯ ಪ್ರಭಾವದಿಂದ ಕಳೆದು ಹೋಗ್ತಿದೆ: ವಿಶ್ವನಾಥ್‌ ಗದ್ದೆಮನೆ

ಕೊಪ್ಪ: ನಿಜವಾದ ಸಾಧಕರಿಗೆ ಸಿಗಬೇಕಾದ ಮನ್ನಣೆ ರಾಜಕೀಯ ಪ್ರಭಾವದಿಂದ ಕಳೆದು ಹೋಗ್ತಿದೆ: ವಿಶ್ವನಾಥ್‌ ಗದ್ದೆಮನೆ

ಕೊಪ್ಪ: ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ವಿವಿಧ ಕ್ರೀಡಾ ಕೂಟಗಳಲ್ಲಿ ಅತ್ಯುತ್ತಮ ಸಾಧನೆಗೈದು ಮಲೆನಾಡಿನ ಹೆಮ್ಮೆ ಆಗಿರುವ ಕೊಪ್ಪ ತಾಲೂಕಿನ ಶಾನುವಳ್ಳಿಯ ಯುವತಿ ಎಸ್.ಎಸ್. ಸ್ನೇಹ ಅವರನ್ನು ಕರ್ನಾಟಕ ಕ್ರೀಡಾ ಇಲಾಖೆಯ “ಮಿಷನ್ ಒಲಂಪಿಕ್ಸ್” ಯೋಜನೆಗೆ ಪರಿಗಣಿಸದೇ ಇರುವುದು ಅತ್ಯಂತ ಬೇಸರದ ಸಂಗತಿ ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷರು ಹಾಗೂ ಬಿಜೆಪಿ ಕಾರ್ಯಕರ್ತ ವಿಶ್ವನಾಥ್‌ ಗದ್ದೆಮನೆ ಅವರು ತಿಳಿಸಿದ್ದಾರೆ.

ಹೌದು .. ನಿಜವಾದ ಸಾಧಕರಿಗೆ ಸಿಗಬೇಕಾದ ಮನ್ನಣೆ, ಕೆಲವೊಮ್ಮೆ ರಾಜಕೀಯ ಪ್ರಭಾವ ಹೊಂದಿದವರಿಗೆ ಸಿಗುತ್ತಿರುವುದು ವಿಷಾದನೀಯ ಎಂದರು

ಹಾಗೆ ಈ ಹಿನ್ನೆಲೆಯಲ್ಲಿ ಮಾನ್ಯ ಶಾಸಕರು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದು, ಅರ್ಹತೆಯ ಆಧಾರದ ಮೇಲೆ ಎಸ್.ಎಸ್. ಸ್ನೇಹ ಅವರನ್ನು “ಮಿಷನ್ ಒಲಂಪಿಕ್ಸ್” ಯೋಜನೆಗೆ ಪರಿಗಣಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಶಾಸಕರಾದ ಟಿ.ಡಿ.ರಾಜೇಗೌಡ ಅವರ ಬಳಿ ವಿನಂತಿಸುತ್ತೇನೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!