Thursday, October 1, 2026
Homeಕ್ರೈಮ್ಬೇಲೂರು: ಮನೆ ಮುಂದೆ ನಿಲ್ಲಿಸಿದ್ದಆಟೋ ಜಖಂಗೊಳಿಸಿದ ಪುಂಡಾನೆ!

ಬೇಲೂರು: ಮನೆ ಮುಂದೆ ನಿಲ್ಲಿಸಿದ್ದಆಟೋ ಜಖಂಗೊಳಿಸಿದ ಪುಂಡಾನೆ!

Telegram Group
Join Now

ಹಾಸನ: ಮನೆಯ ಮುಂದೆ ನಿಲ್ಲಿಸಿದ್ದ ಆಟೋ ಮೇಲೆ ಪುಂಡಾನೆಯೊಂದು ದಾಳಿ ಮಾಡಿ ಜಖಂಗೊಳಿಸಿದ ಘಟನೆ ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದಲ್ಲಿ ನಡೆದಿದೆ. ಕಾಡಾನೆ ದಾಳಿಯ ವೀಡಿಯೋ ಆಟೋ ಮಾಲೀಕನ ಮೊಬೈಲ್‍ನಲ್ಲಿ ಸೆರೆಯಾಗಿದೆ.

ಗ್ರಾಮದ ಕೃಷ್ಣಪ್ಪ ಅವರಿಗೆ ಸೇರಿದ ಆಟೋ ಮೇಲೆ ಕಾಡಾನೆ ದಾಳಿ ನಡೆಸಿದೆ. ಇಂದು (ಮಾ.30) ಬೆಳಗ್ಗೆ ಮನೆಯ ಬಳಿ ಬಂದ ಒಂಟಿಸಲಗ ನಿಂತಿದ್ದ ಆಟೋ ಮೇಲೆ ಏಕಾಏಕಿ ದಾಳಿ ಮಾಡಿದೆ. ದಾಳಿಯಿಂದ ಆಟೋ ಜಖಂಗೊಂಡಿದೆ. ದಾಳಿ ಬಳಿಕ ಕಾಫಿ ತೋಟದೊಳಗೆ ಕಾಡಾನೆ ಓಡಿಹೋಗಿದೆ

ಕಳೆದ ಒಂದು ವಾರದಿಂದ ಕುಪ್ಪಗೋಡು ಗ್ರಾಮದಲ್ಲಿ ಕಾಡಾನೆಗಳ ಹಿಂಡು ಉಳಿದುಕೊಂಡಿವೆ. ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!