Friday, April 3, 2026
Homeಜಿಲ್ಲಾಸುದ್ದಿಕಳಸ: ಹೆಮ್ಮಕ್ಕಿ ಗ್ರಾಮದಲ್ಲಿ 13 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪ ಸೆರೆ!

ಕಳಸ: ಹೆಮ್ಮಕ್ಕಿ ಗ್ರಾಮದಲ್ಲಿ 13 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪ ಸೆರೆ!

ಚಿಕ್ಕಮಗಳೂರು : ಕಳೆದ ಒಂದು ವಾರದ ಹಿಂದೆ ಸೆರೆ ಹಿಡಿದಿದ್ದ ಜಾಗದಲ್ಲೇ ಕಾಳಿಂಗ ಸರ್ಪವೊಂದು ಮತ್ತೊಮ್ಮೆ ಪತ್ತೆಯಾಗಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಹಿರೇಬೈಲು ಸಮೀಪದ ಹೆಮ್ಮಕ್ಕಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮುಂಡಾನೆಯ ಮೋಹನ್ ಗೌಡ್ರು ಅವರು ಅಟ್ಟದಲ್ಲಿ ಯಾವುದೋ ವಸ್ತುವನ್ನು ಹುಡುಕುವ ವೇಳೆಯಲ್ಲಿ ಈ ಕಾಳಿಂಗ ಸರ್ಪ ಬುಸುಗುಟ್ಟಿದೆ. ಹೀಗಾಗಿ, ಮನೆಯ ಸದಸ್ಯರು ಭಯಭೀತರಾಗಿದ್ದಾರೆ. ನಂತರ ಕೂಡಲೇ ಅವರು ಉರಗ ತಜ್ಞ ರಿಜ್ವಾನ್ ಅವರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅವರು ಸತತ ಎರಡು ಗಂಟೆಯವರೆಗೆ ಕಾರ್ಯಾಚರಣೆ ನಡೆಸಿ, ಆ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಯ ಮಾರ್ಗದರ್ಶನದಂತೆ ಸುಮಾರು 5 ಕಿ. ಮೀ. ದೂರದ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಹೀಗಾಗಿ, ಮನೆಯ ಸದಸ್ಯರು ನಿಟ್ಟುಸಿರು ಬಿಟ್ಟಿದ್ದಾರೆ.

ಈ ಕಾಳಿಂಗ ಸರ್ಪ ಕಪ್ಪು ಬಣ್ಣದಿಂದ ಕೂಡಿದ್ದು, ಸುಮಾರು 13 ಅಡಿ ಉದ್ದವಿತ್ತು 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!