ಚಿಕ್ಕಮಗಳೂರು : ಕೇರಳದ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣ ಜಿಲ್ಲೆಯ ಜನ ಹಾಗೂ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಲ್ಲಿ ಮತ್ತಷ್ಟು ಆತಂಕದ ಛಾಯೆ ಎದ್ದು ಕಂಡುಬಂದಿದೆ.

ಹೌದು.. ಕೇರಳದ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣ ಇದರ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಅಂಶ ಬಹಿರಂಗವಾಗಿದ್ದು ಕಾಫಿನಾಡಲ್ಲಿ ಬಾಲಕಿಯರು, ಮಹಿಳೆಯರ ನಾಪತ್ತೆ ಪ್ರಕರಣ ಹೆಚ್ಚಳವಾಗಿದೆ. ಮಹಿಳಾ ದೌರ್ಜನ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಪ್ರಕರಣಗಳು ನಿಜಕ್ಕೂ ಆತಂಕಕ್ಕೆ ಕಾರಣವಾಗಿದೆ.
ಕಳೆದ 3 ವರ್ಷದಲ್ಲಿ 1011 ಹೆಣ್ಣುಮಕ್ಕಳು(ಬಾಲಕಿಯರು) ಮಹಿಳೆಯರು ನಾಪತ್ತೆಯಾಗಿದ್ದು ಅದರಲ್ಲಿ 50 ಮಂದಿಯನ್ನ ಪತ್ತೆ ಹಚ್ಚುವಲ್ಲಿ ಈ ವರೆಗೂ ಪೊಲೀಸ್ ಇಲಾಖೆ ವಿಫಲಗೊಂಡಿದೆ. ಹಾಗೆ ಕಾಫಿನಾಡಲ್ಲಿ ಹೆಣ್ಣು ಮಕ್ಕಳಿಗಿಂತ ಮಹಿಳೆಯರ ನಾಪತ್ತೆ ಪ್ರಕರಣವೇ ಜಾಸ್ತಿ ಎಂದು ವರದಿಗಳು ಬಹಿರಂಗಪಡಿಸಿವೆ.
ಈವರೆಗೂ 3 ವರ್ಷದಲ್ಲಿ 823 ಮಹಿಳೆಯರು ನಾಪತ್ತೆಯಾಗಿದ್ದು ಅದರಲ್ಲಿ 794 ಪ್ರಕರಣ ಪತ್ತೆಯಾಗಿದೆ ಹಾಗೆ 29 ಮಹಿಳೆಯರು ಇನ್ನೂ ಮಿಸ್ಸಿಂಗ್ ಆಗಿದ್ದು ಈ ಬಗ್ಗೆ ಇನ್ನೂ ಪೊಲೀಸರು ಹುಡುಕಾಟದಲ್ಲೇ ಇದ್ದರೆ ಎಂದು ಹೇಳಬಹುದು.ಹಾಗೆ 3 ವರ್ಷದಲ್ಲಿ 188 ಹೆಣ್ಣು ಮಕ್ಕಳು ಮಿಸ್ಸಿಂಗ್ ಆಗಿದ್ದು 167 ಪ್ರಕರಣ ಪತ್ತೆಯಾಗಿದೆ ಇನ್ನು 21 ಹೆಣ್ಣುಮಕ್ಕಳು (ಬಾಲಕಿಯರು) ನಾಪತ್ತೆಯಾಗಿದ್ದು ಈ ಹೆಣ್ಣು ಮಕ್ಕಳು ಎಲ್ಲಿದ್ದಾರೆ ಎಂಬವುದು ಇನ್ನೂ ಪತ್ತೆಯಾಗಿಲ್ಲ. ಮಹಿಳಾ ದೌರ್ಜನ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಪ್ರಕರಣಗಳು ನಿಜಕ್ಕೂ ಆತಂಕಕ್ಕೆ ಕಾರಣವಾಗಿದೆ.
ಹೆಣ್ಣು ಮತ್ತು ಗಂಡು ಮಕ್ಕಳು ನಾಪತ್ತೆಯಾಗಲು ಈ ಕೆಳಕಂಡ ಅಂಶಗಳು ಪ್ರಮುಖ ಕಾರಣಗಳಾಗಿರುತ್ತದೆ. ಮನೆಯಲ್ಲಿ ಅತಿಯಾದ ಶಿಸ್ತು, ಪೋಷಕರ ಕಿರುಕುಳದಿಂದ ಮಕ್ಕಳು ಮನೆ ಬಿಡುವುದು ಒಂದು ಕಾರಣವಾಗಿದೆ.
ಪ್ರೇಮ ಪ್ರೀತಿ ಪ್ರಕರಣಗಳಿಂದ ಹದಿಹರೆಯದವರು ಮನೆ ತೊರೆದು ಕಾಣೆಯಾಗುತ್ತಿರುವುದು. ಟಿವಿ/ಸಿನಿಮಾ/ಮೊಬೈಲ್ ಮುಂತಾದ ಆಧುನಿಕ ಮಾಧ್ಯಮಗಳ ಹವ್ಯಾಸಗಳಿಂದ ಪ್ರಭಾವಿತರಾಗುವುದರಿಂದ ಅತೃಪ್ತಿಗೊಳ್ಳುತ್ತಿರುವುದರಿಂದ ಹಾಗೂ ಶೈಕ್ಷಣಿಕ ವೈಫಲ್ಯದ ಕಾರಣದಿಂದಾಗಿ ನಾಪತ್ತೆಯಾಗಿದ್ದಾರೆ ಎಂದು ಗೃಹ ಇಲಾಖೆ ಉತ್ತರ ನೀಡಿದೆ.
ಇನ್ನು ಮಹಿಳೆಯರ ಹಾಗೂ ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣದಲ್ಲಿ ಅಕ್ರಮ ಕಳ್ಳಸಾಗಣೆಯೂ ಒಂದು ಕಾರಣವಾಗಿದೆ. ಈ ನಿಟ್ಟಿನಲ್ಲಿ ಗೃಹ ಇಲಾಖೆ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
