Friday, July 31, 2026
Homeಕ್ರೈಮ್ಶೃಂಗೇರಿ: SSLC ಫಲಿತಾಂಶದಲ್ಲಿ ಪರೀಕ್ಷಾ ಮಂಡಳಿ ಮಹಾ ಎಡವಟ್ಟು: ವಿದ್ಯಾರ್ಥಿಗೆ ಅನ್ಯಾಯ!

ಶೃಂಗೇರಿ: SSLC ಫಲಿತಾಂಶದಲ್ಲಿ ಪರೀಕ್ಷಾ ಮಂಡಳಿ ಮಹಾ ಎಡವಟ್ಟು: ವಿದ್ಯಾರ್ಥಿಗೆ ಅನ್ಯಾಯ!

Telegram Group
Join Now

ಶೃಂಗೇರಿ: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮೌಲ್ಯಮಾಪಕರಿಂದ ಆಗಿರುವ ದೊಡ್ಡ ಯಡವಟ್ಟೊಂದು ಬೆಳಕಿಗೆ ಬಂದಿದೆ. 

ಹೌದು .. ಶೃಂಗೇರಿಯ ರಾಮಕೃಷ್ಣ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಮದತ್ತ ಶರ್ಮಾ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಇಂಗ್ಲಿಷ್ ಭಾಷೆಯಲ್ಲಿ ರಾಮದತ್ತ ಶರ್ಮ ಅವರಿಗೆ ಬರಬೇಕಿದ್ದ ಅಂಕ 92 ಆಗಿತ್ತು. ಆದರೆ, ಫಲಿತಾಂಶದಲ್ಲಿ ಕೇವಲ 48 ಅಂಕಗಳು ನಮೂದಾಗಿವೆ.

ಇಂಟರ್ನಲ್‌ನಲ್ಲಿ 20 ಅಂಕಗಳು ಹಾಗೂ ಉತ್ತರ ಪತ್ರಿಕೆಯ ಫೋಟೋಕಾಪಿಯಲ್ಲಿ 72 ಅಂಕಗಳು (80ಕ್ಕೆ) ಸ್ಪಷ್ಟವಾಗಿ ದಾಖಲಾಗಿದ್ದು, ಒಟ್ಟು 92 ಅಂಕಗಳು ಬರಬೇಕಿತ್ತು. ಆದರೆ, ಕಂಪ್ಯೂಟರ್‌ನಲ್ಲಿ ಅಂಕಗಳನ್ನು ನಮೂದಿಸುವ ವೇಳೆ ಮೌಲ್ಯಮಾಪಕರು ಮಹಾ ಎಡವಟ್ಟು ಮಾಡಿದ್ದಾರೆ.

ಇದರಿಂದಾಗಿ 20 ಇಂಟರ್ನಲ್ ಅಂಕಗಳ ಜೊತೆಗೆ ಬಾಹ್ಯ ಪರೀಕ್ಷೆಯಲ್ಲಿ 28 ಅಂಕಗಳನ್ನು ಮಾತ್ರ ನಮೂದಿಸಿ, ಒಟ್ಟು 48 ಅಂಕಗಳನ್ನು ನೀಡಲಾಗಿದೆ. 

ಮುಂಬರುವ ದಿನಗಳಲ್ಲಿ ಮಂಡಳಿಯು ತಾಂತ್ರಿಕ ದೋಷವನ್ನು ಸರಿಪಡಿಸಿ ಅಧಿಕೃತ ಅಂಕಗಳನ್ನು ಪರಿಷ್ಕರಿಸುವ ನಿರೀಕ್ಷೆಯನ್ನು ಪೋಷಕರು ನಂಬಿದ್ದಾರೆ,

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments