Monday, May 4, 2026
Homeಜಿಲ್ಲಾಸುದ್ದಿಬಣಕಲ್ ನಜರತ್ ಶಾಲಾ ವಿದ್ಯಾರ್ಥಿಗಳ ಭರ್ಜರಿ ಸಾಧನೆ: ಹದಿನಾಲ್ಕನೇ ಬಾರಿ ಶತಪ್ರತಿಶತ ಫಲಿತಾಂಶ!

ಬಣಕಲ್ ನಜರತ್ ಶಾಲಾ ವಿದ್ಯಾರ್ಥಿಗಳ ಭರ್ಜರಿ ಸಾಧನೆ: ಹದಿನಾಲ್ಕನೇ ಬಾರಿ ಶತಪ್ರತಿಶತ ಫಲಿತಾಂಶ!

ಕೊಟ್ಟಿಗೆಹಾರ : 2025-26ನೇ ಸಾಲಿನ ಐಸಿಎಸ್‌ಇ 10ನೇ ತರಗತಿ ಹಾಗೂ ಐಎಸ್‌ಸಿ 12ನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಬಣಕಲ್‌ನ ನಜರೆತ್ ಶಾಲೆ ಮತ್ತೊಮ್ಮೆ ಶತಪ್ರತಿಶತ ಫಲಿತಾಂಶ ದಾಖಲಿಸಿ ಗಮನಸೆಳೆದಿದೆ.
10ನೇ ತರಗತಿಯಲ್ಲಿ ಸತತ 14ನೇ ವರ್ಷ ಹಾಗೂ 12ನೇ ತರಗತಿಯಲ್ಲಿ ಸತತ 2ನೇ ವರ್ಷವೂ ಶಾಲೆ ಶೇಕಡಾ 100 ಫಲಿತಾಂಶ ಸಾಧಿಸಿದೆ. ಈ ವರ್ಷ 10ನೇ ತರಗತಿಯ 37 ವಿದ್ಯಾರ್ಥಿಗಳು ಮತ್ತು 12ನೇ ತರಗತಿಯ 6 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ.

ಇದರೊಂದಿಗೆ 10ನೇ ತರಗತಿಯ 24 ವಿದ್ಯಾರ್ಥಿಗಳು ಮತ್ತು 12ನೇ ತರಗತಿಯ 2 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಶಾಲೆಯ ಶೈಕ್ಷಣಿಕ ಗುಣಮಟ್ಟಕ್ಕೆ ಮೆರಗು ತಂದಿದೆ.
10ನೇ ತರಗತಿಯಲ್ಲಿ ಚಿರಂತ್ ಡಿ.ಆರ್. ಶೇಕಡಾ 96 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಆಡನ್ ಡಿಸೋಜಾ ಶೇಕಡಾ 95.80 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ಲಿಪಿ ಕಾಕೋಡ್ ಶೇಕಡಾ 89.20 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.

12ನೇ ತರಗತಿಯ ವಿಜ್ಞಾನ ವಿಭಾಗದಲ್ಲಿ ಸಂಜ್ನ್ಯಾ ಶೇಕಡಾ 88 ಅಂಕಗಳೊಂದಿಗೆ ಮೆರೆದರೆ, ವಾಣಿಜ್ಯ ವಿಭಾಗದಲ್ಲಿ ವೈಭವ್ ವಿ. ಪೈ ಶೇಕಡಾ 87 ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಹಿಲ್ಡಾ ಲೋಬೋ ಅವರು ವಿದ್ಯಾರ್ಥಿಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿ, ಶಿಕ್ಷಕರ ಪರಿಶ್ರಮ ಮತ್ತು ಪೋಷಕರ ಸಹಕಾರವೇ ಯಶಸ್ಸಿನ ಮೂಲ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!