ಖಾತೆ ಬದಲಾವಣೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಬಿಲ್ ಕಲೆಕ್ಟರ್ ಜಯರಾಮ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹಾಸನ; ಜಮೀನು ಖಾತೆ ಬದಲಾವಣೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಬಿಲ್ ಕಲೆಕ್ಟರ್ ಜಯರಾಮ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆ ನಗರಸಭೆಯಲ್ಲಿ ಬಿಲ್ ಕಲೆಕ್ಟರ್ ಕೆಲಸ ಮಾಡುತ್ತಿದ್ದ ಜಯರಾಮ್ ಪ್ರತಿಯೊಬ್ಬರಿಗೂ 20,000 ಸಾವಿರ ಲಂಚಕ್ಕೆ ಬೇಡಿಕೆ ಈಡುತ್ತಿದ್ದರು.

ತಂದೆಯಿಂದ ಮಗನಿಗೆ ಖಾತೆ ಬದಲಾವಣೆಗೆ ಅರಸೀಕೆರೆ ನಗರಸಭೆಗೆ ಎಷ್ಟು ಬಾರಿ ಅಲೆದರೂ ಇವರ ಕಾರ್ಯ ಪೂರ್ಣಗೊಳ್ಳುತ್ತಿರಲಿಲ್ಲ. ಈ ಬಗ್ಗೆ ಬೇಸತ್ತ ಹೋದ ವ್ಯಕ್ತಿ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ರು. ಆದ್ರೆ ಇಂದು ಬಿಲ್ ಕಲೆಕ್ಟರ್ ಕಳ್ಳಾಟಕ್ಕೆ ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲು, ಶಿಲ್ಪಾ ಹಾಗೂ ಸಿಬ್ಬಂದಿಗಳು ತೆರೆ ಎಳೆದಿದ್ದಾರೆ.
-ಕಾವ್ಯಶ್ರೀ ಕಲ್ಮನೆ